Publish Date: Mon, 24 Jul 2023 (10:18 IST)
Updated Date: Mon, 24 Jul 2023 (12:19 IST)
ಮಡಿಕೇರಿ : ಬಿಟ್ಟೆನೆಂದರೂ ಬಿಡದೀ ಮಾಯೆ ಎಂಬಂತಿದೆ ಮಳೆಯ ಆರ್ಭಟ ಕೊಡಗು ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಜಿಲ್ಲೆಯಾದ್ಯಂತ ಸತತವಾಗಿ ಮಳೆ ಸುರಿಯತ್ತಿದೆ.
ನಾಪೋಕ್ಲು ಪರಂಬು ಪ್ರದೇಶಗಳು ಜಲಾವೃತಗೊಂಡಿವೆ. ಚೆರಿಯ ಪೆರಂಬು ಗ್ರಾಮಕ್ಕೆ ಪ್ರವಾಸ ಬಂದಿದ್ದ ಕೆಲವರು ಭಾರೀ ಮಳೆಯಂದಾಗಿ ಅಲ್ಲೇ ಸಿಲುಕುವಂತಾಗಿತ್ತು. ರಸ್ತೆಗಳಲೆಲ್ಲ ಜಲಾವೃತಗೊಂಡ ಕಾರಣ ಅವರಿಗೆ ಸಾರಿಗೆ ಸಾಧನ ಇಲ್ಲವಾಗಿಬಿಟ್ಟಿತ್ತು. ಸ್ಥಳೀಯರು ತೆಪ್ಪಗಳ ಮೂಲಕ ಅವರನ್ನು ನಾಪೋಕ್ಲುಗೆ ತಂದು ಬಿಟ್ಟಿದ್ದಾರೆ.
ಮುಂಜಾಗ್ರತೆ ಕ್ರಮವಾಗಿ ಕೊಡಗು ಜಿಲ್ಲಾಡಳಿತ ಶಾಲಾ ಕಾಲೇಜುಗಳಿಗೆ ಇಂದು ರಜೆ ಘೋಷಿಸಿದೆ.