Select Your Language

Notifications

webdunia
webdunia
webdunia
webdunia

ಮಳೆಗಾಲದಲ್ಲಿ ತುಂಬಾ ಅವಶ್ಯಕವಾದ ವಿಟಮಿನ್ ಡಿ ಪೋಷಕಾಂಶ ಪಡೆಯುವುದು ಹೇಗೆ?

ಮಳೆಗಾಲದಲ್ಲಿ ತುಂಬಾ ಅವಶ್ಯಕವಾದ ವಿಟಮಿನ್ ಡಿ ಪೋಷಕಾಂಶ ಪಡೆಯುವುದು ಹೇಗೆ?
ಬೆಂಗಳೂರು , ಶುಕ್ರವಾರ, 21 ಜುಲೈ 2023 (15:18 IST)
ವಿಟಮಿನ್ ಡಿ ನಮ್ಮ ದೇಹಕ್ಕೆ ಬೇಕಾಗಿರುವ ಅಗತ್ಯ ಪೋಷಕಾಂಶಗಳಲ್ಲಿ ಒಂದಾಗಿದೆ. ಇದು ಕ್ಯಾಲ್ಸಿಯಂ ನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಇದಲ್ಲದೆ ಸ್ನಾಯುಗಳು ಸರಿಯಾದ ರೀತಿಯಲ್ಲಿ ಕೆಲಸ ಮಾಡಲು ಸಹಕಾರಿಯಾಗಿದೆ.
 
ಅಷ್ಟೇ ಅಲ್ಲ, ಮೆದುಳಿನಿಂದ ನರಗಳ ಮೂಲಕ ದೇಹಕ್ಕೆ ಸಂದೇಶವನ್ನು ರವಾನಿಸಲು ವಿಟಮಿನ್ ಡಿ ಸಹಾಯ ಮಾಡುತ್ತದೆ. ಹಾಗೂ ಬಲವಾದ ರೋಗನಿರೋಧಕ ಶಕ್ತಿಗಾಗಿ ವಿಟಮಿನ್ ಡಿ ಪೋಷಕಾಂಶವು ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾಗಿದೆ. ಬೆಳಗ್ಗಿನ ಸಮಯದಲ್ಲಿ ಸೂರ್ಯನ ಬೆಳಕಿಗೆ ದೇಹವನ್ನು ಒಡ್ಡಿಕೊಳ್ಳುವ ಮೂಲಕ ವಿಟಮಿನ್ ಡಿ ಪೋಷಕಾಂಶನ್ನು ನೈಸರ್ಗಿಕವಾಗಿ ಪಡೆಯಬಹುದು.

ಮಳೆಗಾಲದಲ್ಲಿ ನಿರಂತರವಾಗಿ ಮೋಡಕವಿದ ವಾತಾವರಣ ಇರುವ ಕಾರಣ ಸೂರ್ಯನ ಕಿರಣಗಳು ಭೂಮಿಗೆ ಅಷ್ಟೊಂದು ಬೀಳುವುದಿಲ್ಲ. ಅಂತಹ ಸಮಯದಲ್ಲಿ ನಾವು ನೈಸರ್ಗಿಕವಾಗಿ ವಿಟಮಿನ್ ಡಿ ಪೋಷಕಾಂಶವನ್ನು ಪಡೆಯಲು ಕಷ್ಟಕರವಾಗುತ್ತದೆ. ಹೀಗಿರುವಾಗ ಕೆಲವು ಪರ್ಯಾಯ ಮಾರ್ಗಗಳ ಮೂಲಕ ವಿಟಮಿನ್ ಡಿ ಪೋಷಕಾಂಶವನ್ನು ಪಡೆಯಬಹುದು. ಮಳೆಗಾಲದಲ್ಲಿ ವಿಟಮಿನ್ ಡಿ ಕೊರತೆಯನ್ನು ನೀಗಿಸಲು ಇಲ್ಲಿವೆ ಕೆಲವು ಪರಿಹಾರಗಳು.

ಆಹಾರ ಪದ್ಧತಿ
ಕೆಲವೊಂದು ಆಹಾರಗಳನ್ನು ಸೇವನೆ ಮಾಡುವ ಮೂಲಕ ಈ ಮಳೆಗಾಲದಲ್ಲಿ ವಿಟಮಿನ್ ಡಿ ಪೋಷಕಾಂಶವನ್ನು ಪಡೆಯಬಹುದು. ಇದಕ್ಕಾಗಿ ಮೀನು ಅಥವಾ ಮೀನಿನ ಎಣ್ಣೆಯನ್ನು ನಿಮ್ಮ ಆಹಾರದಲ್ಲಿ ಸೇರಿಸಿ. ಇದಲ್ಲದೆ ಮೊಟ್ಟೆಯ ಹಳದಿ ಭಾಗ, ಅಣಬೆ, ಚೀಸ್ ನಂತಹ ಕೆಲವು ಆಹಾರಗಳನ್ನು ತಿನ್ನುವ ಮೂಲಕ ವಿಟಮಿನ್ ಡಿ ಪೋಷಕಾಂಶವನ್ನು ಪಡೆದುಕೊಳ್ಳಬಹುದು.

ಪೂರಕಗಳು
ನಿಮ್ಮ ಆಹಾರದಲ್ಲಿ ವಿಟಮಿನ್ ಡಿ ಯಿಂದ ಸಮೃದ್ಧವಾಗಿರುವ ಆಹಾರವನ್ನು ಸೇರಿಸಲು ಸಾಧ್ಯವಾಗದಿದ್ದರೆ, ಅಂತಹ ಜನರು ವೈದ್ಯರ ಸಲಹೆಯೊಂದಿಗೆ ವಿಟಮಿನ್ ಡಿ ಮಾತ್ರೆಗಳನ್ನು ತೆಗೆದುಕೊಳ್ಳಬಹುದು.

ಪೂರಕಗಳನ್ನು ಯಾವಾಗ ತೆಗೆದುಕೊಳ್ಳಬೇಕು: ಅನೇಕ ಜನರು ಈಗಲೇ ಪೂರಕಗಳು ಅಗತ್ಯವಿದೆಯೇ ಅಥವಾ ಇಲ್ಲವೇ ಎಂದು ತಿಳಿಯದೆ ಪೂರಕಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸುತ್ತಾರೆ. ಹೀಗೆ ಮಾಡುವುದು ತಪ್ಪು. ನೀವು ವಿಟಮಿನ್ ಡಿ ಕೊರತೆಯನ್ನು ಹೊಂದಿದ್ದೀರಾ ಅಥವಾ ಇಲ್ಲವೇ ಎಂಬುದನ್ನು ವೈದ್ಯರ ಬಳಿ ಹೋಗಿ ಪರೀಕ್ಷಿಸುವುದು ಬಹಳ ಮುಖ್ಯ.


Share this Story:

Follow Webdunia kannada

ಮುಂದಿನ ಸುದ್ದಿ

ಜೀವನ ಸಂಗಾತಿಯನ್ನು ಆಯ್ಕೆ ಮಾಡುವಾಗ ಈ 3 ವಿಷಯಗಳನ್ನು ಗಮನಿಸಲೇಬೇಕು