Select Your Language

Notifications

webdunia
webdunia
webdunia
webdunia

‘ಖುಷಿ’ ಟೈಟಲ್ ಪೋಸ್ಟರ್ ರಿಲೀಸ್

Title Poster Release
bangalore , ಸೋಮವಾರ, 16 ಮೇ 2022 (19:10 IST)
ದಕ್ಷಿಣ ಭಾರತದ ಸ್ಟಾರ್ ನಟಿ ಸಮಂತಾ ಮತ್ತು ಸೆನ್ಸೇಷನ್ ಸ್ಟಾರ್ ವಿಜಯ್ ದೇವರಕೊೆಂಡ ನಟನೆಯ ಹೊಸ ಸಿನಿಮಾದ ಟೈಟಲ್ ರಿವೀಲ್ ಆಗಿದೆ. ಇಬ್ಬರ ಸಿನಿಮಾದ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು..ಇದೀಗ ಸಮಂತಾ ಮತ್ತು ದೇವರಕೊಂಡ ಸಿನಿಮಾದ ಚಿತ್ರಕ್ಕೆ ‘ಖುಷಿ’ ಎಂದು ಟೈಟಲ್ ಇಡಲಾಗಿದೆ..ಟೈಟಲ್ ರಿಲೀಸ್ ಮಾಡುವ ಮೂಲಕ ಫ್ಯಾನ್ಸ್ ಕುತೂಹಲಕ್ಕೆ ತೆರೆ ಎಳೆದಿದ್ದಾರೆ. ಜೊತೆಗೆ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಕೂಡ ಬಿಡುಗಡೆ ಮಾಡಿದ್ದಾರೆ..ಟೈಟಲ್ ಪೋಸ್ಟರ್ ನಲ್ಲಿ ಸಮಂತಾ ಸೀರೆ ಧರಿಸಿ, ಮದುಮಗಳಂತೆ ರೆಡಿಯಾಗಿದ್ರೆ, ವಿಜಯ್ ದೇವರಕೊಂಡ ಕಾಶ್ಮೀರಿ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ, ಬಹುನಿರೀಕ್ಷೆಯ ‘ಖುಷಿ’ ಸಿನಿಮಾ ಡಿಸೆಂಬರ್ 23ರಂದು ತೆರೆಗೆ ಬರುತ್ತಿದೆ ಎಂದು ಬಹಿರಂಗ ಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನೇಣು ಬಿಗಿದ ಸ್ಥಿತಿಯಲ್ಲಿ ಬಂಗಾಳಿ ನಟಿ ಪತ್ತೆ