Select Your Language

Notifications

webdunia
webdunia
webdunia
webdunia

ಹಿಂದೂ ಯುವಕರಿಗೆ ತ್ರಿಶೂಲ ದೀಕ್ಷೆ

Trishula ordination for Hindu youths
ಇಸ್ಲಾಮೀಕರಣಕ್ಕೆ ಸೆಡ್ಡು ಹೊಡೆಯಲು ಭಜರಂಗದಳದವರು ಕೊಡಗಿನಲ್ಲಿ ಶೌರ್ಯ ಪ್ರಶಿಕ್ಷಣ ವರ್ಗ ಹೆಸರಿನಲ್ಲಿ ಹಿಂದೂ ಕಾರ್ಯಕರ್ತರಿಗೆ ಬಂದೂಕು ತರಬೇತಿ ನೀಡಿದ್ದಾರೆ. ಪೊನ್ನಂಪೇಟೆ ಸಾಯಿ ಶಂಕರ ಶಾಲೆಯಲ್ಲಿ ಈ ತರಬೇತಿ ನೀಡಲಾಗಿದೆ. ಹಿಂದೂ ಕಾರ್ಯಕರ್ತರಿಗೆ ತ್ರಿಶೂಲ ನೀಡಿ, ಬಂದೂಕು ತರಬೇತಿ ನೀಡಲಾಗಿದೆ. ವಿಶ್ವ ಹಿಂದೂ ಪರಿಷತ್, ಭಜರಂಗದಳದ ದಕ್ಷಿಣ ಪ್ರಾಂತ್ಯದ ವತಿಯಿಂದ ಈ ಕಾರ್ಯಕ್ರಮ ನಡೆದಿದೆ. ಭಯೋತ್ಪಾದನೆಗೆ ತರಬೇತಿ ನೀಡಲಾಗುತ್ತಿದೆ ಎಂದು SDPI ಆರೋಪ ಮಾಡಿದೆ. ಆದರೆ ತೀವ್ರವಾದಿ ಸಂಘಟನೆಯಾದ SDPI ನಡೆಸುವ ಅಪರಾಧ ಕೃತ್ಯದ ವೇಳೆ ಆತ್ಮರಕ್ಷಣೆಗೆ ಈ ತರಬೇತಿ ನೀಡಲಾಗಿದೆ ಎಂದು ಭಜರಂಗದಳ ಸಮರ್ಥನೆ ಮಾಡಿಕೊಂಡಿದೆ. ಈಗಾಗಲೇ ಬೆಂಗಳೂರಿನ ಡಿಜೆ ಹಳ್ಳಿ, ಹುಬ್ಬಳ್ಳಿಯಲ್ಲಿ ಮುಸ್ಲಿಂರು ದಾಂಧಲೆ ಮಾಡಿದ್ದಾರೆ. ಅಂತ ಸಮಯದಲ್ಲಿ ಆತ್ಮರಕ್ಷಣೆ ಮಾಡಿಕೊಳ್ಳಲು ಈ ತರಬೇತಿ ನೀಡಲಾಗಿದೆ ಎಂದು ಭಜರಂಗದಳವು ಸ್ಪಷ್ಟಪಡಿಸಿದೆ

Share this Story:

Follow Webdunia kannada

ಮುಂದಿನ ಸುದ್ದಿ

ಮೋದಿಗೆ ರಕ್ತದಲ್ಲಿ ಪತ್ರ ಬರೆದ PSI ಅಭ್ಯರ್ಥಿಗಳು