Select Your Language

Notifications

webdunia
webdunia
webdunia
webdunia

ಬಯಲಾಯ್ತು ಡೀಲ್ ಸೀಕ್ರೆಟ್..!

Exclusive Deal Secret
bangalore , ಸೋಮವಾರ, 16 ಮೇ 2022 (18:50 IST)
ರಾಜ್ಯದ 545 ಪಿಎಸ್​ಐ ನೇಮಕಾತಿ ಹಗರಣದಲ್ಲಿ ಅಕ್ರಮಕ್ಕೆ ಸಂಬಂಧಿಸಿದಂತೆ ತನಿಖೆ ವೇಳೆ ಸ್ಫೋಟಕ ಮಾಹಿತಿ ಲಭ್ಯವಾಗಿದೆ..PSI ಪರೀಕ್ಷೆಯಲ್ಲಿ ಭಾಗಿಯಾಗಿದ್ದ ಅಭ್ಯರ್ಥಿಗಳು R.D.ಪಾಟೀಲ್ ಹಾಗೂ ದಿವ್ಯಾ ಹಾಗರಗಿ ಜೊತೆ ಸಂಪರ್ಕ ಹೊಂದಿದ್ದರು ಎನ್ನುವುದಕ್ಕೆ ಸಾಕ್ಷಿಗಳು ಸಿಕ್ಕಿವೆ. ಸಿಐಡಿ ತನಿಖೆ ವೇಳೆ ಡೀಲ್ ನಡೆಸಿದ್ದಾನೆ ಎನ್ನುವುದಕ್ಕೆ ಹಲವು ಸಾಕ್ಷಿ ಲಭ್ಯವಾಗಿದ್ದು, R.D.ಪಾಟೀಲ್ ನಾಲ್ಕು ಅಭ್ಯರ್ಥಿಗಳನ್ನು ಡೀಲ್ ಮಾಡಿಸಿರೋದು ಪತ್ತೆಯಾಗಿದೆ. ದಿವ್ಯಾ ಐದು ಅಭ್ಯರ್ಥಿಗಳನ್ನು ಡೀಲ್ ಮಾಡಿಸಿದ್ದಾಗಿ ತನಿಖೆ ವೇಳೆ ಬಹಿರಂಗವಾಗಿದೆ. ಇಬ್ಬರು ಸೇರಿ 9 ಅಭ್ಯರ್ಥಿಗಳನ್ನು ಡೀಲ್ ಮಾಡಿಸಿದ್ದು, ಒಬ್ಬೊಬ್ಬರ ಬಳಿ 40 ಲಕ್ಷದಿಂದ 80 ಲಕ್ಷದವರೆಗೂ ಹಣದ ವ್ಯವಹಾರ ನಡೆದಿರೋದು ಪತ್ತೆಯಾಗಿದೆ. ಆದ್ರೆ 9 ಅಭ್ಯರ್ಥಿಗಳ ಪೈಕಿ ಇದೀಗ 7 ಮಂದಿಯನ್ನ ಅರೆಸ್ಟ್ ಮಾಡಲಾಗಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಶಾಲೆಗಳಲ್ಲಿ ಚಿಣ್ಣರ ಚಿಲಿಪಿಲಿ