Publish Date: Mon, 25 Apr 2022 (18:30 IST)
Updated Date: Mon, 25 Apr 2022 (18:31 IST)
ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣ ಕುರಿತು ಸುದ್ದಿಗೋಷ್ಠಿ ನಡೆಸಿ ಶಾಸಕ ಪ್ರಿಯಾಂಕ್ ಖರ್ಗೆ ಸ್ಪಷ್ಟನೆ ನೀಡಿದ್ದಾರೆ. ಅಕ್ರಮಗಳ ಬಗ್ಗೆ ಸಚಿವರೇ ಧ್ವನಿ ಎತ್ತಿದ್ದಾರೆ, ಆದ್ರೆ ಇದ್ಯಾವುದು ನಿಮ್ಮ ಗಮನಕ್ಕೆ ಬರಲಿಲ್ವಾ ಗೃಹ ಮಂತ್ರಿಗಳೇ ಎಂದು ಪ್ರಶ್ನೆ ಮಾಡಿದ್ದಾರೆ..ನೇಮಕಾತಿ ಆದೇಶಕ್ಕೂ ಮೊದಲೇ ಅರುಣ್ ಎಂಬ ಅಭ್ಯರ್ಥಿ ಯೂನಿಫಾರ್ಮ್ ಹಾಕಿ ಅಭಿನಂದನೆ ಸ್ವೀಕರಿಸಿದ್ದಾನೆ..ನೀವು ಇಂಟಲಿಜೆನ್ಸ್, ನಿಮಗೆ ಕಾಮನ್ ಸೆನ್ಸ್ ಇಲ್ವಾ.. ಬಂದಿರೋ ಮಾಹಿತಿಯನ್ನ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದೇನೆ..ಇದರಲ್ಲಿ ನನ್ನ ತಪ್ಪೇನಿದೆ...? ಯಾಕೆ ಸಿಐಡಿ ವಿಚಾರಣೆ..? ಇದಕ್ಕೆ ನನಗೆ ನೋಟಿಸ್ ಕೊಡ್ತೀರಾ..? HM, CM ಅವರನ್ನು ತನಿಖೆಗೆ ಒಳಪಡಿಸಿ, ನಮ್ಮನ್ನಲ್ಲ, ನಮಗೆ ನೋಟಿಸ್ ಕೊಡಬೇಡಿ ಎಂದು ಪ್ರಿಯಾಂಕ್ ಖರ್ಗೆ ಕೆಂಡಾಮಂಡಲರಾಗಿದ್ದಾರೆ..