Publish Date: Fri, 01 Nov 2019 (16:45 IST)
Updated Date: Fri, 01 Nov 2019 (16:47 IST)
ರಾಜ್ಯದ ಮಕ್ಕಳ ಶಾಲಾ ಪಠ್ಯದಿಂದ ಟಿಪ್ಪು ಸುಲ್ತಾನ್ ಇತಿಹಾಸ ತೆಗೆಯುವ ಪ್ರಶ್ನೆಯೇ ಇಲ್ಲ. ಹೀಗಂತ ಬಿಜೆಪಿ ಯು ಟರ್ನ್ ಹೊಡೆದಿದೆ.
ಟಿಪ್ಪು ಸುಲ್ತಾನ್ ಇತಿಹಾಸವನ್ನು ಪಠ್ಯ ಪುಸ್ತಕಗಳಿಂದ ತೆಗೆದುಹಾಕಲಾಗುತ್ತದೆ ಅನ್ನೋದು ಕೇವಲ ಊಹಾಪೋಹ ಅಷ್ಟೇ. ಹೀಗಂತ ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.
ಟಿಪ್ಪು ಜಯಂತ್ಯುತ್ಸವ ಆಚರಣೆ ಬಗ್ಗೆಯೂ ಸ್ಪಷ್ಟವಾಗಿ ಹೇಳದ ಶ್ರೀರಾಮುಲು, ಟಿಪ್ಪು ಜಯಂತಿ ಬಗ್ಗೆ ಮಾಹಿತಿ ಗೊತ್ತಿಲ್ಲ ಅಂತ ಹೇಳಿದ್ದಾರೆ.
ರಾಜ್ಯ ಸರಕಾರ ಹಾಗೂ ಬಿಜೆಪಿ ವಿರುದ್ಧ ಸಿದ್ದರಾಮಯ್ಯ ತಪ್ಪು ಹಾಗೂ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ. ಹೀಗಂತ ಶ್ರೀರಾಮುಲು ಆರೋಪ ಮಾಡಿದ್ರು.