Select Your Language

Notifications

webdunia
webdunia
webdunia
webdunia

ಗುಟ್ಟಾಗಿ ಮದುವೆಯಾದ ನಟಿ ನಿತ್ಯ ಮೆನನ್ ?

ನಟಿ
ಚೆನ್ನೈ , ಶುಕ್ರವಾರ, 1 ನವೆಂಬರ್ 2019 (16:33 IST)
ಮೈನಾ ಖ್ಯಾತಿಯ ನಟಿ ನಿತ್ಯ ಮೆನನ್ ಕದ್ದು – ಮುಚ್ಚಿ ಮದುವೆಯಾಗಿದ್ದಾರೆ. ಹೀಗಂತ ಸುದ್ದಿಯೊಂದು ಹರಿದಾಡಲಾರಂಭಿಸಿದೆ.

ಕನ್ನಡದಲ್ಲಿ ಮೈನಾ, ಕೋಟಿಗೊಬ್ಬ 2 ಹಾಗೂ ತೆಲುಗಿನ ಗೀತ ಗೋವಿಂದಂ ಚಲನಚಿತ್ರಗಳು ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿರೋ ನಿತ್ಯಗೆ ಕದ್ದು ಮುಚ್ಚಿ ಮದುವೆಯಾಗೋವಂಥದ್ದು ಏನಿತ್ತು? ಅಂತ ಅಭಿಮಾನಿಗಳು ಗೊಂದಲದಲ್ಲಿ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.

ತಮಿಳು ಮಾಧ್ಯಮವೊಂದರಲ್ಲಿ ನಿತ್ಯ ಮೆನನ್ ಕುರಿತು ಬರೆದ ಸುದ್ದಿಯಲ್ಲಿ ಶ್ರೀಮತಿ ನಿತ್ಯ ಅಂತ ಬರೆಯಲಾಗಿದೆ. ಹೀಗಾಗಿ ನಿತ್ಯ ಮೆನನ್ ಮದುವೆಯನ್ನು ಗೌಪ್ಯವಾಗಿ ಇಟ್ಟುಕೊಂಡಿದ್ದಾರೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ.

ನಿತ್ಯಳ ಕೈ ಹಿಡಿದಿರೋ ಗಂಡು ಯಾರು ಅನ್ನೋ ಕುರಿತಾಗಿಯೂ ಚರ್ಚೆಗಳು ಶುರುವಾಗಿವೆ.


Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡ ರಾಜ್ಯೋತ್ಸವದಂದು ಮತ್ತೆ ಪುಂಡಾಟಿಕೆ ಮೆರೆದ ಎಂಇಎಸ್