Select Your Language

Notifications

webdunia
webdunia
webdunia
webdunia

ಯಡಿಯೂರಪ್ಪ ಸಮ್ಮುಖದಲ್ಲೆ ಟಿಕೆಟ್ ಗಾಗಿ ಕಿತ್ತಾಟ

ಯಡಿಯೂರಪ್ಪ ಸಮ್ಮುಖದಲ್ಲೆ ಟಿಕೆಟ್ ಗಾಗಿ ಕಿತ್ತಾಟ
ಕಲಬುರಗಿ , ಶನಿವಾರ, 1 ಸೆಪ್ಟಂಬರ್ 2018 (17:46 IST)
ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ಗಾಗಿ ಬಿಜೆಪಿ ನಾಯಕರು ಕಿತ್ತಾಡಿಕೊಂಡಿರುವ ಘಟನೆ ನಡೆದಿದೆ.
ಕಲಬುರಗಿ ನಗರದ ಐವಾನ್ ಇ ಶಾಹಿ ಅತಿಥಿ ಗೃಹದ ಬಳಿ ನಡೆದಿದೆ. ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ  ಸಮ್ಮುಖದಲ್ಲಿಯೇ ಬಿಜೆಪಿ ನಾಯಕರಾದ ಸುಭಾಷ್ ರಾಥೋಡ ಹಾಗೂ ಮಾಜಿ ಸಚಿವ  ಬಾಬುರಾವ್ ಚವ್ಹಾಣ ಕಿತ್ತಾಡಿಕೊಂಡಿದ್ದಾರೆ.

ಸುಭಾಷ್ ರಾಥೋಡ್‌ಗೆ ಕಲಬುರಗಿ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡುವಂತೆ ಅವರ ಬೆಂಬಲಿಗರು ಬಿ.ಎಸ್.ಯಡಿಯೂರಪ್ಪಗೆ ಮನವಿ ಸಲ್ಲಿಸಿದ್ರು. ಈ ವೇಳೆ ಅಲ್ಲಿಯೇ ಇದ್ದ ಮಾಜಿ ಸಚಿವ ಬಾಬುರಾವ್ ಚವ್ಹಾಣ, ವಯಕ್ತಿಕವಾಗಿ ಮನವಿ ಮಾಡಿ, ಬಂಜಾರಾ ಸಮುದಾಯದಿಂದ ಅಂತಾ ಏಕೆ ಹೇಳ್ತಿರಿ ಎಂದು ಬಾಬುರಾವ್ ಚವ್ಹಾಣ ಪ್ರಶ್ನೆ ಮಾಡಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸುಭಾಸ ರಾಠೋಡ ಹಾಗೂ ಚವ್ಹಾಣ ಮಧ್ಯೆ ವಾಗ್ವಾದ ನಡೆಯಿತು. ಇದ್ರಿಂದ ಕೋಪಗೊಂಡ ಬಿಎಸ್ ವೈ ಸರ್ವೇ ಮಾಡಿ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡೋದಾಗಿ ಹೇಳಿ ಅಲ್ಲಿಂದ ಸಿಟ್ಟಿನಿಂದಲೇ ಹೊರಟು ಹೋದ್ರು.

ಬಿಎಸ್‌ವೈ ತೆರಳಿದ ಬಳಿಕ ಸುಭಾಷ ರಾಥೋಡ್ ಬೆಂಬಲಿಗರು ಹಾಗೂ ಬಾಬುರಾವ್ ಚವ್ಹಾಣ್ ಮಧ್ಯೆ ವಾಗ್ವಾದ ನಡೆಯಿತು. ಇಬ್ಬರ ಬೆಂಬಲಿಗರು ಕೂಡ ಪರಸ್ಪರ ಬೈದಾಡಿಕೊಂಡಿದ್ದು ಕೈಕೈ ಮಿಲಾಯಿಸುವ ಹಂತಕ್ಕೂ ತಲುಪಿತು. ನಂತರ ಬಿಜೆಪಿ ಮುಖಂಡರು ಮಧ್ಯೆಸ್ಥಿಕೆ ವಹಿಸಿ ಇಬ್ಬರನ್ನೂ ಸಮಾಧಾನಪಡಿಸಿದ್ರು.

 

 

Share this Story:

Follow Webdunia kannada

ಮುಂದಿನ ಸುದ್ದಿ

ಹಾಸನದಲ್ಲಿ ಜಮೀನು ಗೋಲಮಾಲ್: ಸಚಿವ ರೇವಣ್ಣ ಗುಡುಗಿದ್ದೇನು?