Publish Date: Wed, 14 Nov 2018 (19:13 IST)
Updated Date: Wed, 14 Nov 2018 (19:14 IST)
ಪ್ರವಾಸಕ್ಕೆ ಎಂದು ಹೋದವರಲ್ಲಿ ಒಂದೇ ಕುಟುಂಬದ ಮೂವರು ಹೆಣವಾದ ಘಟನೆ ನಡೆದಿದೆ.
ಟ್ರಾಕ್ಸ್ ಮತ್ತು ಲಾರಿ ಮುಖಾ-ಮುಖಿ ಡಿಕ್ಕಿ ಹೊಡೆದ ಪರಿಣಾಮ 3 ಮಹಿಳೆಯರು ಸಾವಿಗೀಡಾಗಿದ್ದು, 10 ಜನರಿಗೆ ಗಾಯಗಳಾಗಿರುವ ಘಟನೆ ಕೂಡ್ಲಿಗಿ ಸಮೀಪ ಶಿವಪುರದಲ್ಲಿ ನಡೆದಿದೆ.
ಪ್ರವಾಸ ಮುಗಿಸಿ ವಾಪಸ್ ತಮ್ಮ ಗ್ರಾಮಕ್ಕೆ ಹೊರಟಿದ್ದ ಒಂದೇ ಕುಟುಂಬದ ಸಂಬಂಧಿಗಳು ಬೀಜಿನ್ (43), ಶಬನಾ (22) ಹಾಗೂ ರಬೀಯಾ (41) ತೀವ್ರ ಗಾಯಗೊಂಡು ಸ್ಥಳದಲ್ಲೆ ಸಾವನ್ನಪ್ಪಿದರು. ಮಹಾರಾಷ್ಟ್ರದ ಪುಣೆಯ ಮಹಮ್ಮದ್ ಸಂದ್ಯಾಲ್ (10), ಅಫಾನಂದ್ಯಾಲ್ (10), ಗಫೂರ್ ನಂದ್ಯಾಲ್ (14), ಮುಸ್ಕಾನ್ ನಂದ್ಯಾಲ್ (13) ನಾಸೀರ್ (68) ಚಿಕ್ಕ ಆಸಂಗಿ ಗ್ರಾಮದವರಿಗೆ ತೀವ್ರ ಗಾಯಗಳಾಗಿದ್ದು ಕೂಡ್ಲಿಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್ ಗೆ ದಾಖಲಿಸಲಾಗಿದೆ.
ಕೂಡ್ಲಿಗಿ ಸಮೀಪದ ಶಿವಪುರ ಕಾಯ್ದಿಟ್ಟ ಅರಣ್ಯ ಪ್ರದೇಶದ ಸಮೀಪದಲ್ಲಿ ಎದುರಿಗೆ ಬರುತ್ತಿದ್ದ ಈಚರ್ ಲಾರಿಯೊಂದು ಟ್ರ್ಯಾಕ್ಸ್ ಗೆ ಮುಖಾ-ಮುಖಿ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಸಿದೆ.