Publish Date: Sat, 01 Jun 2019 (17:02 IST)
Updated Date: Sat, 01 Jun 2019 (17:04 IST)
ಮತ್ತೆ ಬೀದಿನಾಯಿಗಳ ಅಟ್ಟಹಾಸಕ್ಕೆ ಮೂವರು ಬಾಲಕರಿಗೆ ಗಂಭೀರ ಗಾಯಗಳಾದ ಘಟನೆ ನಡೆದಿದೆ.
ಮನೆಯ ಮುಂದೆ ಆಟವಾಡುತ್ತಿದ್ದ ಮಕ್ಕಳಿಗೆ ಕಚ್ಚಿ ಗಂಭೀರ ಗಾಯಗೊಳಿಸಿವೆ ಬೀದಿನಾಯಿಗಳು. ಬೀದಿ ನಾಯಿಗಳ ದಾಳಿಗೆ ಮೂವರು ಮಕ್ಕಳು ಗಂಭೀರ ಗಾಯಗೊಂಡಿದ್ದಾರೆ.
ಕಲಬುರ್ಗಿಯ ಝಬೇರಾ ಕಾಲೋನಿಯಲ್ಲಿ ನಡೆದ ಘಟನೆ ಇದಾಗಿದೆ.
ಮಹಮ್ಮದ್ ಫೈಸಲ್ (4), ಮಹಮದ್ ಸಮೀವುಲ್ಲಾ(4), ಮಹಮ್ಮದ್ ಜಾಹಿದ್ (5) ಗಂಭೀರ ಗಾಯಗೊಂಡ ಬಾಲಕರಾಗಿದ್ದಾರೆ.
ಮಕ್ಕಳ ಮುಖ, ಕೈ, ಕಾಲು ಸೇರಿ ದೇಹದ ಹಲವಡೆ ಕಚ್ಚಿ ಗಾಯಗೊಳಿಸಿವೆ ಬೀದಿನಾಯಿಗಳು. ಗಾಯಾಳು ಮಕ್ಕಳನ್ನು ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ.
ಕಲಬುರ್ಗಿಯಲ್ಲಿ ಪದೇಪದೇ ನಡೆಯುತ್ತಿರುವ ಬೀದಿ ನಾಯಿಗಳ ಹಾವಳಿ ಹಾಗೂ ದಾಳಿ ನಿಯಂತ್ರಣಕ್ಕೆ ಮುಂದಾಗಬೇಕೆಂದು ಸ್ಥಳೀಯರು ಆಗ್ರಹ ಮಾಡಿದ್ದಾರೆ.