Publish Date: Sat, 01 Jun 2019 (16:49 IST)
Updated Date: Sat, 01 Jun 2019 (16:51 IST)
ಹಬ್ಬದ ನಿಮಿತ್ತ ಮಾರುಕಟ್ಟೆಗೆ ಖರೀದಿಗೆ ಬಂದಿದ್ದ ಮಹಿಳೆಯರು ಪರಸ್ಪರ ಚಪ್ಪಲಿಯಿಂದ ಹೊಡೆದಾಡಿಕೊಂಡ ವಿಡಿಯೋ ಈಗ ಸಖತ್ ವೈರಲ್ ಆಗಿದೆ.
ಹುಬ್ಬಳ್ಳಿಯ ಶಾ ಬಜಾರನಲ್ಲಿ ನಡೆದಿರುವ ಘಟನೆ ಎನ್ನಲಾಗಿದ್ದು, ಈ ಮಹಿಳೆಯರು ಯಾರು ಎಂಬುದು ತಿಳಿದು ಬಂದಿಲ್ಲ. ಆದ್ರೆ ಸಾಮಾಜಿಕ ಜಾಲತಾಣದಲ್ಲಿ ದುರ್ಗದ ಬೈಲ್ ನ ಶಾ ಬಜಾರ್ ನಲ್ಲಿ ನಡೆದ ದೃಶ್ಯಾವಳಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದ್ದು ಸಾಕಷ್ಟು ವೈರಲ್ ಆಗಿದೆ. ಮಹಿಳೆಯರು ತಮ್ಮ ಪತಿ ಹಾಗೂ ಸಂಬಂಧಿಗಳ ಜೊತೆ ಮಾರುಕಟ್ಟೆಗೆ ಬಂದಿದ್ದರು.
ಈ ವೇಳೆ ಒಬ್ಬ ಬೈಕ್ ತೆಗೆಯುವಾಗ ಮಹಿಳೆಗೆ ತಾಗಿದೆ. ಇದರಿಂದ ಕುಪಿತಗೊಂಡ ಮಹಿಳೆಯು ನಿಂದಿಸುತ್ತಿದ್ದದನ್ನು ನೋಡಿದ ಆತನ ಪತ್ನಿಯು ಅವಳೊಂದಿಗೆ ಜಗಳ ತೆಗೆದಿದ್ದಾಳೆ. ಅದು ವಿಕೋಪಕ್ಕೆ ಹೋಗುತ್ತಿದ್ದಂತೆ ಪರಸ್ಪರ ಕೈಕೈ ಮಿಲಾಯಿಸಿದ್ದಾರೆ. ಮಹಿಳೆಯರೊಂದಿಗೆ ಬಂದಿದ್ದ ಮಹಿಳೆಯರಿಬ್ಬರು ಸಹಿತ ಜಗಳ ಬಿಡಿಸುವ ಬದಲು ಅವರು ಸಹಿತ ಹೊಡೆದಾಡಿಕೊಂಡಿದ್ದಾರೆ. ಗಲಾಟೆ ವೇಳೆ ಓರ್ವ ಮಹಿಳೆ ನೆಲಕ್ಕೆ ಬಿದ್ದಿದ್ದಾರೆ.
ನಂತರ ಮಹಿಳೆಯರ ಗಂಡಂದಿರು ತಮ್ಮ ಪತ್ನಿಯರನ್ನು ಅಲ್ಲಿಂದ ಕರೆದುಕೊಂಡು ಹೋಗಿದ್ದಾರೆ. ಮಹಿಳೆಯರ ಗಲಾಟೆಯ ದೃಶ್ಯಗಳನ್ನು ಅಲ್ಲಿದ್ದ ಕೆಲವರು ಮೊಬೈಲ್ ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಇದೀಗ ವೈರಲ್ ಆಗಿದೆ. ಈ ಕುರಿತು ಯಾರೂ ದೂರು ಕೊಟ್ಟಿಲ್ಲವೆಂದು ತಿಳಿದುಬಂದಿದೆ.