Select Your Language

Notifications

webdunia
webdunia
webdunia
webdunia

ಮಹಾರಾಷ್ಟ್ರದಲ್ಲಿ ಮೂವರ ಮೇಲೆ ದಾಳಿ ಪ್ರಕರಣ; ಬಿಜೆಪಿ ಕೋಮುವಾದದ ಬಣ್ಣ ಹಚ್ಚುತ್ತಿದೆ ಎಂದ ಶಿವಸೇನೆ

ಮಹಾರಾಷ್ಟ್ರದಲ್ಲಿ ಮೂವರ ಮೇಲೆ ದಾಳಿ ಪ್ರಕರಣ; ಬಿಜೆಪಿ ಕೋಮುವಾದದ ಬಣ್ಣ ಹಚ್ಚುತ್ತಿದೆ ಎಂದ ಶಿವಸೇನೆ
ಮುಂಬೈ , ಗುರುವಾರ, 23 ಏಪ್ರಿಲ್ 2020 (07:14 IST)
ಮುಂಬೈ : ಮಹಾರಾಷ್ಟ್ರದ ಪಾಲ್ವರ್ ನಲ್ಲಿ ಓರ್ವ ಸಾಧು ಸೇರಿ ಮೂವರ ಮೇಲೆ ನಡೆದ ಸಾಮೂಹಿಕ ದಾಳಿಗೆ ಸಂಬಂಧಿಸಿದಂತೆ ಇದಕ್ಕೆ ಬಿಜೆಪಿ ಪಕ್ಷ ಕೋಮುವಾದದ ಬಣ್ಣ ಹಚ್ಚಲು ಪ್ರಯತ್ನಿಸುತ್ತಿದೆ ಎಂದು ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶ್ಮುಖ್ ಆರೋಪಿಸಿದ್ದಾರೆ.


ಫೇಸ್ ಬುಕ್ ಲೈವ್ ನಲ್ಲಿ ಮಾತನಾಡಿದ ಅವರು, ಕಳೆದ ವಾರ  ಮಹಾರಾಷ್ಟ್ರದ ಪಾಲ್ವರ್ ಜಿಲ್ಲೆಯಲ್ಲಿ ಓರ್ವ ಸಾಧು ಸೇರಿ ಮೂವರ ಮೇಲೆ ಸಾಮೂಹಿಕ ದಾಳಿ ನಡೆದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ 101 ಜನರನ್ನು ಬಂಧಿಸಿಲಾಗಿದೆ. ಆದರೆ ಅವರಲ್ಲಿ ಯಾರು ಮುಸ್ಲಿಂರಿಲ್ಲ ಎಂದು ಹೇಳಿದ್ದಾರೆ.


ಆದರೆ ಈ ಘಟನೆಗೆ ಕೋಮು ಬಣ್ಣ ಬಳಿಯಲು ಪ್ರಯತ್ನಿಸಿದ ಬಿಜೆಪಿ ಇದು ಮುಸ್ಲಿಂರೇ ಮಾಡಿರುವ ಕೃತ್ಯ ಎಂದು ಬಿಂಬಿಸಲು ಹೊರಟಿತ್ತು. ಇದು ರಾಜಕೀಯವಾಗಿ ಹೊಡೆದಾಡಿಕೊಳ್ಳುವ ಸಮಯವಲ್ಲ. ನಾವೆಲ್ಲ ಸೇರಿ ಕೊರೊನಾ ವಿರುದ್ಧ ಹೋರಾಡಬೇಕಿದೆ ಎಂದು ಅವರು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಲಾಕ್ ಡೌನ್ ಸಡಿಲ ಆದ್ರೂ ನಿಮಗೆ ಇವು ಸಿಗೋದಿಲ್ಲ