Select Your Language

Notifications

webdunia
webdunia
webdunia
webdunia

ಮೂವರು ಹೈಟೆಕ್ ಕಳ್ಳರ ಬಂಧನ; 66 ಲಕ್ಷ ಮೌಲ್ಯದ 10 ಕಾರ್ ವಶಕ್ಕೆ

ಹೈಟೆಕ್ ಕಳ್ಳರ ಬಂಧನ
ಗದಗ , ಶುಕ್ರವಾರ, 27 ಜುಲೈ 2018 (20:23 IST)
ಗದಗ ಜಿಲ್ಲಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಹೈಟೆಕ್ ಕಾರು ಕಳ್ಳರನ್ನ ಬಂಧಿಸಿದ್ದಾರೆ. ಬಂಧಿತರಿಂದ  66 ಲಕ್ಷ ರೂ ಮೌಲ್ಯದ10 ಕಾರುಗಳು ವಶಪಡಿಸಿಕೊಂಡಿರೋ ಪೊಲೀಸರು ಮೂವರು ಆರೋಪಿಗಳನ್ನ ಬಂಧಿಸಿದ್ದಾರೆ.

ಕೊಪ್ಪಳ ಮೂಲದ ಭೀಮಪ್ಪ ಶೆಟ್ಟಿಬಲೀಜಗ, ಬಾಬಾ ಫಕ್ರುದ್ದೀನ ಪಿಂಜಾರ್ ಹಾಗೂ ಹುಬ್ಬಳ್ಳಿ ಮೂಲದ ಶಿವಕುಮಾರ ಪೂಜಾರ ಬಂಧಿತ ಆರೋಪಿಗಳು. ಇನ್ನೂ ಪ್ರಮುಖ ಆರೋಪಿಗಳಾದ ಬಂಟವಾಳ ಮೂಲದ ಮೊಹಮ್ಮದ್ಹನೀಫ್ ಮತ್ತು ಉಡಪಿ ಮೂಲದ ಇಕಾಸ್  ಆರೋಪಿಗಳು ಪರಾರಿಯಾಗಿದ್ದು, ಪರಾರಿಯಾದ ಆರೋಪಿಗಳನ್ನು ಬಂಧಿಸಲು ಪೊಲೀಸರು ವಿಶೇಷ ತಂಡ ರಚನೆ ಮಾಡಿದ್ದಾರೆ.

ಪರಾರಿಯಾದ ಇಬ್ಬರೂ ಆರೋಪಿಗಳೇ ಪ್ರಮುಖವಾಗಿ ಕಾರುಗಳ್ಳರಾಗಿದ್ದು ಬಂಧಿತರಾದ ಆರೋಪಿಗಳಿಗೆ ಕದ್ದ ಕಾರುಗಳನ್ನು ಮಾರಲು ನೀಡಲಾಗುತ್ತಿತ್ತು ಎಂದು ಪೊಲೀಸ ತನಿಖೆಯಿಂದ ಗೊತ್ತಾಗಿದೆ ಎಂದು ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಸಂತೋಷ ಬಾಬು ತಿಳಿಸಿದ್ದಾರೆ. ಬಂಧಿತರಿಂದ 5 ಸ್ವಿಫ್ಟ್ ಕಾರು, 2 ಹುಂಡೈ ಕಾರು, 1 ರೆನಾಲ್ಟ್ ಕಾರು, 1 ಹೋಂಡಾ ಕಾರು, 1 ಚಾವರಲೆಟ್ ಕಾರು ವಶಪಡಿಸಿಕೊಳ್ಳಲಾಗಿದೆ. ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.



 

Share this Story:

Follow Webdunia kannada

ಮುಂದಿನ ಸುದ್ದಿ

ನೀರಾವರಿ ಹೋರಾಟಗಾರರು ವಿಜ್ಞಾನಿಗಳಲ್ಲ ಎಂದ ಶಾಸಕ