Select Your Language

Notifications

webdunia
webdunia
webdunia
webdunia

ನಂದಿಬೆಟ್ಟಕ್ಕೆ ಸಾವಿರಾರು ಪ್ರವಾಸಿಗರು

Thousands of tourists to Nandibetta
bangalore , ಸೋಮವಾರ, 2 ಜನವರಿ 2023 (17:43 IST)
ಹೊಸ ವರ್ಷದ ಸಂಭ್ರಮಾಚರಣೆಗೆ ವಿಶ್ವವಿಖ್ಯಾತ ನಂದಿಗಿರಿಧಾಮಕ್ಕೆ ಪ್ರವಾಸಿಗರ ದಂಡೇ ಆಗಮಿಸಿದೆ. ಬೆಳ್ಳಂಬೆಳಗ್ಗೆ ಕಾರು ಹಾಗೂ ಬೈಕ್ ಗಳಲ್ಲಿ ನಾ ಮುಂದು ತಾ ಮುಂದು ಅಂತ ಪ್ರವಾಸಿಗರು ನಂದಿಬೆಟ್ಟದತ್ತ ಲಗ್ಗೆಯಿಟ್ಟಿದ್ದಾರೆ. ಹೊಸ ವರ್ಷದ ಮೊದಲ ದಿನ ನಂದಿಬೆಟ್ಟದಿಂದಲೇ ಸೂರ್ಯೋದಯದ ಸವಿಯನ್ನು ಸವಿಯಲು ಸಾವಿರಾರು ಮಂದಿ ನಂದಿಬೆಟ್ಟಕ್ಕೆ ಆಗಮಿಸಿದ್ರು. ಶನಿವಾರ ಸಂಜೆ 6 ಗಂಟೆಯಿಂದ ಭಾನುವಾರ ಬೆಳಗ್ಗೆ 6 ಗಂಟೆಯವರೆಗೆ ನಂದಿ ಬೆಟ್ಟ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಹೀಗಾಗಿ ಮಧ್ಯರಾತ್ರಿಯೇ ನಂದಿಬೆಟ್ಟದ ಚೆಕ್ ಪೋಸ್ಟ್ ಬಳಿ ಸಾವಿರಾರು ಮಂದಿ ಜಮಾಯಿಸಿದ್ದರು. ಬೆಳಗ್ಗೆ 6 ಗಂಟೆಗೆ ಪೊಲೀಸರು ಚೆಕ್ ಪೋಸ್ಟ್ ತೆರೆಯುತ್ತಿದ್ದಂತೆ ಜನ ನಾ ಮುಂದು ತಾ ಮುಂದು ಅಂತ ನಂದಿಬೆಟ್ಟದತ್ತ ಮುನ್ನುಗ್ಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಣ್ಣಿದ್ದೂ ಕುರುಡನ ಹಾಗೆ ನಟಿಸಿದ ಕೋತಿ