ನಿನ್ನೆ ಮೋದಿಯಿಂದ ಲೋಕಾರ್ಪಣೆಯಾದ ಮೆಟ್ರೋಗೆ ಇಂದು ಇದೆಂಥಾ ಪ್ರತಿಕ್ರಿಯೆ

Sampriya
ಸೋಮವಾರ, 11 ಆಗಸ್ಟ್ 2025 (14:38 IST)
Photo Credit X
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರಿಂದ ನಿನ್ನೆ ಲೋಕಾರ್ಪಣೆಯಾದ ನಮ್ಮ ಮೆಟ್ರೊ ಹಳದಿ ಮಾರ್ಗದಲ್ಲಿ ರೈಲುಗಳ ಟ್ರಿಪ್‌ನಲ್ಲಿ ಭಾರಿ ಅಂತರ ಇರುವುದರಿಂದ ನಿಲ್ದಾಣ ಹಾಗೂ ರೈಲುಗಳಲ್ಲಿ ಪ್ರಯಾಣಿಕರ ದಟ್ಟಣೆ ಕಂಡುಬಂದಿದೆ. 

ಈ ಕುರಿತು ಅನೇಕ ಪ್ರಯಾಣಿಕರು ತಾವು ಅನುಭವಿಸಿದ ಸಮಸ್ಯೆಯನ್ನು ಸಾಮಾಜಿಕ ಜಾಲತಾಣಗಳಾದ ಪೇಸ್‌ಬುಕ್‌, ಎಕ್ಸ್‌ನಲ್ಲಿ ತೋಡಿಕೊಂಡಿದ್ದಾರೆ. 

ಮೆಟ್ರೋ ಹಳದಿ ಮಾರ್ಗದಿಂದಾಗಿ  19 ಕಿ.ಮೀ ದೂರವನ್ನು ಕೇವಲ 33 ನಿಮಿಷದಲ್ಲಿ ತಲುಪುತ್ತಿದ್ದೇವೆ. ವ್ಯವಸ್ಥೆ ಅದ್ಭುತವಾಗಿದೆ. ಆದರೆ, ಎರಡೂ ಕಡೆ ಭಾರಿ ದಟ್ಟಣೆ ಉಂಟಾಗುತ್ತಿದೆ ಎಂದು ಪ್ರಯಾಣಿಕರೊಬ್ಬರು ಅಲವತ್ತುಕೊಂಡಿದ್ದಾರೆ.

ಮೊದಲ ದಿನ ಪ್ರಯಾಣ ಅನುಭವ ಕೆಟ್ಟದಾಗಿತ್ತು. ಇದಕ್ಕೆ ಟ್ರಿಪ್ ಅಂತರವೇ ಕಾರಣ. ಆದಷ್ಟು ಬೇಗ ಬಿಎಂಆರ್‌ಸಿಎಲ್ ಹೆಚ್ಚಿನ ರೈಲುಗಳನ್ನು ಓಡಿಸಬೇಕು ಎಂದು ಮನವಿ ಮಾಡಿದ್ದಾರೆ. ಇದೇ ರೀತಿ ಹಲವರು ಹಳದಿ ಮಾರ್ಗದಲ್ಲಿ ದಟ್ಟಣೆಯ ಫೋಟೊ, ವಿಡಿಯೊಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಬಿಎಂಆರ್‌ಸಿಎಲ್ ಅಧಿಕಾರಿಗಳು ಈ ಸಂಬಂಧ ಪ್ರತಿಕ್ರಿಯಿಸಿ, ಹೆಚ್ಚು ರೈಲು ಬೋಗಿಗಳು ಪೂರೈಕೆಯಾಗುತ್ತಿದ್ದಂತೆ, ರೈಲುಗಳ ಟ್ರಿಪ್‌ ಹೆಚ್ಚಿಸಲಾಗುವುದು ಎಂದರು.

ಪ್ರತಿ ಭಾನುವಾರ ರೈಲು ಸಂಚಾರ ಬೆಳಿಗ್ಗೆ 6.30ರ ಬದಲಾಗಿ 7ಕ್ಕೆ ಪ್ರಾರಂಭವಾಗಲಿದೆ. ಹಳದಿ ಮಾರ್ಗದ ಟರ್ಮಿನಲ್ ನಿಲ್ದಾಣಗಳ ನಡುವಿನ ಪ್ರಯಾಣದ ದರ ₹60 ಆಗಿದೆ.  ಟೋಕನ್‌, ಎನ್‌ಸಿಎಂಸಿ ಕಾರ್ಡ್‌, ಬಿಎಂಆರ್‌ಸಿಎಲ್ ಸ್ಮಾರ್ಟ್ ಕಾರ್ಡ್‌, ಕ್ಯೂಆರ್‌ ಟಿಕೆಟ್‌ ಲಭ್ಯವಿವೆ<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಗ್ರಹಾರದಲ್ಲಿ ಅಕ್ರಮ ಹೆಚ್ಚು ಬೆನ್ನಲ್ಲೇ, ಖಡಕ್ ಪೊಲೀಸ್ ಅಧಿಕಾರಿ ಎಂಟ್ರಿ, ಕೈದಿಗಳಿಗೆ ನಡುಕ

ಷಡ್ಯಂತ್ರ ಬಯಲು ಬೆನ್ನಲ್ಲೇ ಮಹತ್ವದ ಪ್ರಕಟಣೆ ಹೊರಡಿಸಿದ ಧರ್ಮಸ್ಥಳ

ರೇಷ್ಮೆ ಬದಲು ಪಾಲಿಸ್ಟರ್ ಶಾಲು ತಿರುಪತಿ ದೇವಸ್ಥಾನದಲ್ಲಿ ಏನಿದು ಹಗರಣ

ಐಪಿಎಲ್ ಪಂದ್ಯವನ್ನು ಬೆಂಗಳೂರಿನಿಂದ ಹೊರಗೆ ಹೋಗಲು ಬಿಡುವುದಿಲ್ಲ: ಶಿವಕುಮಾರ್‌

ದ್ವೇಷ ಭಾಷಣ ಕಾರುವವರಿಗೆ ಮುಂದೈತೆ ಮಾರಿಹಬ್ಬ: ವಿಧಾನಸಭೆಯಲ್ಲಿ ಮಂಡನೆಯಾಯ್ತು ಪ್ರತಿಬಂಧಕ ಮಸೂದೆ

ಮುಂದಿನ ಸುದ್ದಿ
Show comments