Select Your Language

Notifications

webdunia
webdunia
webdunia
webdunia

ಬೆಂಗಳೂರು,ಬೆಳಗಾವಿ ಸೇರಿ 3 ವಂದೇ ಭಾರತ್ ರೈಲುಗಳ ಉದ್ಘಾಟನೆ

ಬೆಂಗಳೂರು ಬೆಳಗಾವಿ ಮೆಟ್ರೋ ರೈಲು

Sampriya

ಬೆಂಗಳೂರು , ಭಾನುವಾರ, 10 ಆಗಸ್ಟ್ 2025 (14:27 IST)
Photo Credit X
ಬೆಂಗಳೂರು: ಬೆಂಗಳೂರು ನಗರದ ಜನತೆಯ ಬಹುನಿರೀಕ್ಷಿತ ಯೋಜನೆಯಾದ ಬೆಂಗಳೂರು ಯೆಲ್ಲೋ ಮೆಟ್ರೋ ರೈಲು ಸಂಚಾರಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಜೀ ಇಂದು ಚಾಲನೆ ನೀಡಲಿದ್ದಾರೆ. ಇದರಿಂದಾಗಿ ಬೆಂಗಳೂರಿನಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ. 

ಬೆಂಗಳೂರಿಗೆ ಇಂದು ಆಗಮಿಸಿದ ಗೌರವಾನ್ವಿತ ಪ್ರಧಾನಿ ಮೋದಿ ಜೀ ಅವರು ಕೆಎಸ್‍ಆರ್ ರೈಲ್ವೇ ನಿಲ್ದಾಣಕ್ಕೆ ತೆರಳಿದರು. ಅಲ್ಲಿ ಅವರು ಬೆಂಗಳೂರು - ಬೆಳಗಾವಿ ಒಂದೇ ಭಾರತ್ ರೈಲಿಗೆ ಚಾಲನೆ ನೀಡಿದರು. ಅಮೃತ್‍ಸರ್ - ಶ್ರೀ ಮಾತಾ ವೈಷ್ಣೋದೇವಿ ಮತ್ತು ನಾಗಪುರ್-ಪುಣೆ ವಂದೇ ಭಾರತ್ ರೈಲುಗಳಿಗೆ ಅವರು ಆನ್‍ಲೈನ್ ಮೂಲಕ ಚಾಲನೆ ನೀಡಿದರು.

ಕೆಎಸ್‍ಆರ್ ಒಂದೇ ಭಾರತ್ ರೈಲು ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾನ್ಯ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್, ವಿ.ಸೋಮಣ್ಣ, ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಮತ್ತು ಸಂಸದ ಪಿ.ಸಿ. ಮೋಹನ್, ಪ್ರಮುಖರು ಉಪಸ್ಥಿತರಿದ್ದರು

ಮಾನ್ಯ ಪ್ರಧಾನಿಗಳಾದ ಮೋದಿ ಜೀ ಅವರು ಇಂದು ಬೆಂಗಳೂರು ಯಲ್ಲೋ ಮೆಟ್ರೋ ರೈಲು ಸಂಚಾರವನ್ನು ಲೋಕಾರ್ಪಣೆ ಮಾಡಲಿದ್ದಾರೆ. ಅಲ್ಲದೆ 15,611 ಕೋಟಿ ರೂ ವೆಚ್ಚದ ಬೆಂಗಳೂರು ಮೆಟ್ರೋ ಹಂತ-3 ರ ಶಂಕುಸ್ಥಾಪನೆಯನ್ನೂ ನೆರವೇರಿಸಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಧರ್ಮಸ್ಥಳ: ಗುಂಪು ಘರ್ಷಣೆ ಪ್ರಕರಣದಲ್ಲಿ ಬಿಗ್‌ಟ್ವಿಸ್ಟ್‌