ಈ ಸಂತೆಯಲ್ಲಿ ಮಕ್ಕಳೇ ಭರ್ಜರಿಯಾಗಿ ವ್ಯಾಪಾರ ಮಾಡಿದ್ದಾರೆ.
ಮಂಡ್ಯ ಜಿಲ್ಲೆಯ ಹೊಸಹೊಳಲು ಗ್ರಾಮದಲ್ಲಿ ಮಕ್ಕಳ ಸಂತೆಯಲ್ಲಿ ಭರ್ಜರಿ ವ್ಯಾಪಾರವಾಗಿದೆ.
ಪೈಪೋಟಿಯ ಮೇಲೆ ವ್ಯಾಪಾರ ಮಾಡಿದ್ದಾರೆ ಮಕ್ಕಳು.
ಮಕ್ಕಳ ಮಾರಾಟವನ್ನು ಪ್ರೋತ್ಸಾಹಿಸಿ ಹಣ್ಣು ತರಕಾರಿಗಳನ್ನು ಖರೀದಿ ಮಾಡಿ ಸಂಭ್ರಮಿಸಿದ್ದಾರೆ ಪೋಷಕರು.
ಮಂಡ್ಯ ಹೊಸಹೊಳಲು ಗ್ರಾಮದ ಸಂತೆ ಮೈದಾನದಲ್ಲಿ ಭಾನುವಾರ ಸಂತೆಯ ಬದಲು ಮಕ್ಕಳಿಗೆ ಸೃಜನಶೀಲತೆ ಹಾಗೂ ವ್ಯವಹಾರ ಜಾಣ್ಮೆಯನ್ನು ಕಲಿಸಲು ಮೈಸೂರಿನ ಸಂಸ್ಥೆಯು ಸುಗಮ್ಯ ಶಿಕ್ಷಾ ಕಾರ್ಯಕ್ರಮದ ಅಡಿಯಲ್ಲಿ ಆಯೋಜಿಸಿದ್ದ ಮಕ್ಕಳ ಸಂತೆಯಲ್ಲಿ ವ್ಯಾಪಾರ ವ್ಯವಹಾರಗಳು ಭರ್ಜರಿಯಾಗಿ ನಡೆದವು.
ಜಿಲ್ಲಾ ಪಂಚಾಯತ ಉಪಾಧ್ಯಕ್ಷೆ ಗಾಯತ್ರಿರೇವಣ್ಣ ಮಕ್ಕಳ ಸಂತೆಯನ್ನು ಉದ್ಘಾಟಿಸಿ ಸಂತೆಯಲ್ಲಿ ಮಕ್ಕಳು ಮಾರಾಟ ಮಾಡುತ್ತಿದ್ದ ಶುಂಠಿ, ಮೂಲಂಗಿ, ಸಪ್ಸಿಗೆಸೊಪ್ಪು, ಮೆಂತ್ಯಾಸೊಪ್ಪು ಹಾಗೂ ಟೊಮ್ಯಾಟೊ ಹಣ್ಣನ್ನು ಖರೀದಿಸಿದರು.
ಮಕ್ಕಳಲ್ಲಿ ಬಾಲ್ಯದಿಂದಲೇ ಲೋಕಜ್ಞಾನ, ಸೃಜನಶೀಲತೆ ಹಾಗೂ ಲೆಕ್ಕಾಚಾರವನ್ನು ಕಲಿಯಲು ಮಕ್ಕಳ ಸಂತೆಯು ವರದಾನವಾಗಿದೆ ಎಂದ್ರು.