Select Your Language

Notifications

webdunia
webdunia
webdunia
webdunia

ತಿಮ್ಮಯ್ಯ ಮ್ಯೂಸಿಯಂ ನಲ್ಲಿ ರೂ. 7.50 ಲಕ್ಷ ಸಂಗ್ರಹ

ತಿಮ್ಮಯ್ಯ ಮ್ಯೂಸಿಯಂ ನಲ್ಲಿ ರೂ. 7.50 ಲಕ್ಷ ಸಂಗ್ರಹ
madikere , ಸೋಮವಾರ, 15 ನವೆಂಬರ್ 2021 (21:02 IST)
ಮಡಿಕೇರಿ:ನಗರದ ಆಕರ್ಷಕ ಕೇಂದ್ರಗಳಲ್ಲಿ ಒಂದಾಗಿರುವ ಜನರಲ್ ತಿಮ್ಮಯ್ಯ ಮ್ಯೂಸಿಯಂನಲ್ಲಿ ಈ ತನಕ ರೂ.7.50 ಲಕ್ಷ ಹಣ ಶುಲ್ಕದ ರೂಪದಲ್ಲಿ ಸಂಗ್ರಹವಾಗಿದೆ.
ಪ್ರಸ್ತುತ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಈ ಕೇಂದ್ರ ನಿರ್ವಹಿಸಲ್ಪಡುತ್ತಿದ್ದು, 2021ರ ಫೆಬ್ರವರಿ 6 ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಉದ್ಘಾಟಿಸಲ್ಪಟ್ಟಿತ್ತು. ತಿಮ್ಮಯ್ಯ ಮ್ಯೂಸಿಯಂ ಉದ್ಘಾಟನೆ ನಂತರದ ಕೆಲವು ಸಮಯ ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿತ್ತು. ಬಳಿಕ ಹಿರಿಯರಿಗೆ ರೂ.30, ಮಕ್ಕಳಿಗೆ ರೂ.15 ಪ್ರವೇಶ ದರ ನಿಗದಿ ಪಡಿಸಲಾಗಿದ್ದು,ಐದು ವರ್ಷದೊಳಗಿನ ಮಕ್ಕಳಿಗೆ ಉಚಿತ ಪ್ರವೇಶದ ಅವಕಾಶವಿದೆ.
ಸೋಮವಾರ ಹೊರತುಪಡಿಸಿ ವಾರದ ಇತರ ಎಲ್ಲಾ ದಿನಗಳಲ್ಲೂ ಬೆಳಗ್ಗೆ 10 ರಿಂದ ಸಂಜೆ 6ರ ತನಕ ಮೂಸಿಯಂ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶವಿರುವುದಾಗಿ ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಕೆ.ಟಿ. ದರ್ಶನಾ ಅವರು ಮಾಹಿತಿ ನೀಡಿದ್ದಾರೆ

Share this Story:

Follow Webdunia kannada

ಮುಂದಿನ ಸುದ್ದಿ

1 ಸಾವಿರ ಪರಿಹಾರ ನೀಡುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಗ್ರಾಹಕ ಕೋರ್ಟ್ ಆದೇಶ