Select Your Language

Notifications

webdunia
webdunia
webdunia
Sunday, 13 April 2025
webdunia

ಭಾರಿ ಕಳ್ಳತನಕ್ಕೆ ಕೈ ಹಾಕಿ ಫೇಲ್ ಆದ ಕಳ್ಳರು

ಸರಣಿ
ಮೈಸೂರು , ಬುಧವಾರ, 19 ಜೂನ್ 2019 (16:37 IST)
ತಡರಾತ್ರಿ ಭಾರಿ ಕಳ್ಳತನಕ್ಕೆ ಕೈ ಹಾಕಿ ಕಳ್ಳರು ವಿಫಲಗೊಂಡ ಘಟನೆ ನಡೆದಿದೆ.

ಒಂದೇ ರಾತ್ರಿ 3 ಅಂಗಡಿಗಳಲ್ಲಿ ದೋಚಲು ಮುಂದಾಗಿ ಬಾಗಿಲುಗಳನ್ನು ಮೀಟಿದ್ದಾರೆ ಡಕಾಯಿತರು. ಸಿಸಿಟಿವಿ ಇದ್ದರೂ ಲೆಕ್ಕಿಸದೆ ಕಳ್ಳತನಕ್ಕೆ ಮುಂದಾಗಿದ್ದಾರೆ ಖದೀಮರು. ನಂಜನಗೂಡು ಪಟ್ಟಣದಲ್ಲಿ ನಿಲ್ಲದ ಡಕಾಯಿತರ ಹಾವಳಿ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.

ನಂಜನಗೂಡು ಪಟ್ಟಣದ ಹುಲ್ಲಹಳ್ಳಿ  ಮುಖ್ಯರಸ್ತೆಯಲ್ಲಿ ನಡೆದಿರುವ ಘಟನೆ ಇದಾಗಿದೆ. ಪಟ್ಟಣದ ಹುಲ್ಲಹಳ್ಳಿ ರಸ್ತೆಯಲ್ಲಿರುವ ನಂದಿನಿ ಹಾರ್ಡ್ವೇರ್, ವರ್ಧಮಾನ ಹಾರ್ಡ್ವೇರ್ ಹಾಗೂ ಈಗಲ್ ಪ್ಯಾಲೇಸ್ ಅಂಗಡಿಯಲ್ಲಿ ಬಾಗಿಲುಗಳನ್ನು ಮಿಟಿರುವ ಡಕಾಯಿತರು ಕಳ್ಳತನ ಯತ್ನ ನಡೆಸಿದ್ದಾರೆ.

ಹಾಸಿಗೆ ಅಂಗಡಿಯಲ್ಲಿ ಸುಮಾರು ಐದು ಸಾವಿರಕ್ಕೂ ಹೆಚ್ಚು ಬೆಲೆಬಾಳುವ ಬ್ಯಾಗ್ ಮತ್ತೊಂದು ನಾಲ್ಕು ಚಕ್ರ ವಾಹನದ ಬ್ಯಾಟರಿ ಹೊತ್ತೊಯ್ದಿದ್ದಾರೆ. ಇನ್ನು ಎರಡು  ದೊಡ್ಡ  ಹಾರ್ಡ್ವೇರ್ ಅಂಗಡಿಗಳಲ್ಲಿ ಬಾಗಿಲು ಮೀಟುವ ಸಂದರ್ಭ  ಶಬ್ದ ಬಂದ ಕಾರಣ ಕಳ್ಳ ರು ಸ್ಥಳದಿಂದ ಕಾಲ್ಕಿತ್ತಿದ್ದಾರೆ.  

ಸುಮಾರು ಆರು ತಿಂಗಳ ಹಿಂದೆ ನಂಜನಗೂಡು ಪಟ್ಟಣದ ಹೃದಯ ಭಾಗದ ಕೆನರಾ ಬ್ಯಾಂಕ್ ನಲ್ಲಿ ಹಾಡುಹಗಲೇ ಸುಮಾರು 7 ಲಕ್ಷ ರೂಗಳ ಹಣವನ್ನು ಕದ್ದು ಪರಾರಿಯಾಗಿದ್ದರು.  ತಡರಾತ್ರಿ ನಡೆದಿರುವ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ನಕಲಿ ಐಪಿಎಸ್ ಪ್ರೋಫೈಲ್ ಹಾಕಿ ಯಾಮಾರಿಸುತ್ತಿದ್ದ ವಂಚಕಿ ಅಂದರ್