Select Your Language

Notifications

webdunia
webdunia
webdunia
webdunia

ಏರ್‌ಪೋರ್ಟ್‌ ರಸ್ತೆಯಲ್ಲಿ ಕಳ್ಳರ ಹಾವಳಿ

ಏರ್‌ಪೋರ್ಟ್‌ ರಸ್ತೆಯಲ್ಲಿ ಕಳ್ಳರ ಹಾವಳಿ
bangalore , ಮಂಗಳವಾರ, 17 ಅಕ್ಟೋಬರ್ 2023 (19:00 IST)
ಬೆಂಗಳೂರಿನ ಏರ್ಪೋರ್ಟ್ ರಸ್ತೆಯಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ. ಟೀ ಅಂಗಡಿ, ಪೆಟ್ಡಿಗೆ ಅಂಗಡಿ, ಹಾರ್ಡ್ ವೇರ್ ಅಂಗಡಿಗಳೇ ಈ ಕಳ್ಳರ ಟಾರ್ಗೆಟ್ ಆಗಿದೆ.. ನಿರಂತರ ಕಳ್ಳತನಗಳಿಂದ ಅಂಗಡಿ ಮಾಲೀಕರು ಕಂಗಾಲಾಗಿದ್ದಾರೆ.. ಕಳೆದ ಹದಿನೈದು ದಿನಗಳಲ್ಲಿ ಸಾಲು ಸಾಲು ಕಳ್ಳತನ ವಾಗುತ್ತಿದ್ದು, ಈಶಾನ್ಯ ವಿಭಾಗದ ಯಲಹಂಕ, ಚಿಕ್ಕಜಾಲ, ಕೊತ್ತನೂರು ಸೇರಿದಂತೆ ಇನ್ನು ಕೆಲವೆಡೆ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ. ಇಷ್ಟೆಲ್ಲಾ ಕಳ್ಳತನವಾದ್ರು ಈ ಬಗ್ಗೆ ಪೊಲೀಸರು ಯಾವುದೇ ಗಮನ ಹರಿಸಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇನ್ನು ಈ ಕಳ್ಳರ ಕಳ್ಳತನದ ದೃಶ್ಯ CCTVಯಲ್ಲಿ ಸೆರೆ ಸಿಕ್ಕಿದ್ದು, ಖದೀಮರನ್ನ ಬೇಗನೇ ಬಂಧಿಸುವಂತೆ ಸರ್ವಜನಿಕರು ಒತ್ತಾಯಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಟ್ರಕ್‌ಗೆ ಬೆಂಕಿ, ನಾಲ್ವರ ಸಾವು..!