Select Your Language

Notifications

webdunia
webdunia
webdunia
webdunia

ಪರಸ್ತ್ರೀ ಜೊತೆ ಪಲ್ಲಂಗ ಏರುತ್ತಿದ್ದ ಮನೆಯಲ್ಲಿಯೇ ರಕ್ತದೋಕುಳಿ

There was a blood hole in the house where he was climbing the bed with the woman
bangalore , ಸೋಮವಾರ, 16 ಜನವರಿ 2023 (18:55 IST)
ಅವ್ರಿಬ್ರು ಒಂದು ಕಾಲದ ಕ್ಲಾಸ್ ಮೇಟ್ಸ್.ಆತನಿಗೆ ಮದುವೆಯಾಗಿ ಮಕ್ಕಳಿದ್ದಾರೆ.ಈಕೆಗೂ ಮದುವೆಯಾಗಿದ್ದು ಇಬ್ಬರು ಮಕ್ಕಳಿದ್ದಾರೆ.ಆದರೆ ಕೆಲ ವರ್ಷದ ಹಿಂದೆ ಪತಿ ನಿಧನಹೊಂದಿದ್ದ.ಆಗಿನಿಂದ ಹತ್ತಿರವಾಗಿದ್ದ ಆಸಾಮಿ ಮದುವೆಯಾಗುವಂತೆ ಪೀಡಿಸತೊಡಗಿದ್ದ.ಒಲ್ಲೆ ಎಂದಾಕೆಗೆ ಚಾಕು ತೆಗೆದು ಚುಚ್ಚೇಬಿಟ್ಟ.ಇಬ್ಬರು ಮಕ್ಕಳ ಜೊತೆಗೆ ನಿಂತಿರೊ ಈಕೆಯ ಹೆಸರು ಹಬೀಬಾ ತಾಜ್.ವಯಸ್ಸು 31 ವರ್ಷ.ಇನ್ನೂ ಒಳ್ಳೊ ಪೆಂಗನಂತೆ ಕೈಕಟ್ಟಿಕೊಂಡು ನಿಂತಿರೊ ಇವ್ನು ಶೇಕ್ ಮೆಹಬೂಬ್.ಹಬೀಬಾ ಅಕೌಂಟೆಂಟ್ ಆಗಿ ಕೆಲಸ ಮಾಡಿಕೊಂಡಿದ್ರೆ.ಶೇಕ್ ಮೆಹಬೂಬ್ ಆಟೋ ಓಡಿಸ್ತಿದ್ದ.ಇವ್ರಿಬ್ರು ಒಂದು ಕಾಲದ ಸ್ನೇಹಿತರು.ಅದೇ ಸಲುಗೆ ಅಕ್ರಮ ಸಂಬಂಧದ ವರೆಗೆ ಬಂದಿತ್ತು.ಕೊನೆಗೆ ನೆತ್ತರು ಕೂಡ ಹರಿದಿತ್ತು.
ಮಹಿಳೆಯನ್ನ ಆ ವ್ಯಕ್ತಿ ಈ ಪರಿ ಚುಚ್ಚಿದ್ದು ಯಾಕೆ ಅಂತಾ ‌ನೋಡೋದಾದ್ರೆ.ಚಾಕು ಇರಿತಕ್ಕೊಳಗಾದ ಹಬೀಬಾ ತಾಜ್ ಗೆ ವಿವಾಹವಾಗಿದ್ದು 6 ವರ್ಷದ ಹಿಂದೆ ಪತಿ ತೀರಿಕೊಂಡಿದ್ದ. ಎರಡು ಮಕ್ಕಳ ಜೊತೆಗೆ ವಾಸಮಾಡಿಕೊಂಡಿದ್ದ ಹಬೀಬಾಗೆ ಆರೋಪಿ ಶೇಕ್ ಮೆಹಬೂಬ್ ಹತ್ತಿರವಾಗಿದ್ದ.ಆಟೋ ಚಾಲಕನಾಗಿರುವ ಶೇಕ್ ಮೆಹಬೂಬ್ ಗೂ ಸಹ ಮದುವೆಯಾಗಿ ಮಕ್ಕಳಿದ್ದಾರೆ. ಆದರೂ ಸಹ  ಹಬೀಬಾಳೊಂದಿಗೆ ಸಲುಗೆಯಿಂದಿದ್ದು ಅಕ್ರಮ ಸಂಬಂಧ ಬೆಳೆಸಿದ್ದ.ಆದ್ರೆ‌ ಇತ್ತೀಚೆಗೆ ಶೇಕ್ ಮೆಹಬೂಬ್ ನಿಂದ ದೂರವಾಗಲು ಯತ್ನಿಸಿದ್ದ ಹಬೀಬಾ,ಬೇರೆ ಮದುವೆಯಾಗಲು ತಯಾರಾಗಿದ್ದಳು. ಆದ್ರೆ ಅದು ಆರೋಪಿ ಶೇಕ್ ಮೆಹಬೂಬ್ ಗೆ ಇಷ್ಟವಿರಲಿಲ್ಲ.ಎಲ್ಲಿ ನನ್ನಿಂದ ದೂರವಾಗಿಬಿಡ್ತಾಳೊ ಅಂತಾ ನಿರಾಕರಿಸತೊಡಗಿದ್ದ.ಇದೇ ವಿಚಾರವಾಗಿ ಮಾತನಾಡಲು. ನಿನ್ನೆ ತಡರಾತ್ರಿ11 ಗಂಟೆಗೆ ಹಬೀಬಾಳ ಮನೆಗೆ ಬಂದಿದ್ದ ಮಾತಿಗೆ ಮಾತು ಬೆಳೆದು ಇಬ್ಬರ ಮಧ್ಯೆ ಗಲಾಟೆಯಾಗಿದೆ. ಈ ವೇಳೆ ಮಕ್ಕಳೆದುರೇ ಹಬೀಬಾಗೆ ಚಾಕು ಇರಿದ ಶೇಕ್ ಮೆಹಬೂಬ್ ಸ್ಥಳದಿಂದ ಕಾಲ್ಕಿತ್ತಿದ್ದ.
ಘಟನೆ ಬಳಿಕ ಮಹಿಳೆ  ಸಹೋದರ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಆರ್.ಟಿ.ನಗರ ಠಾಣಾ ಪೊಲೀಸರು ಆರೋಪಿಯನ್ನ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.ಏನೇ ಹೇಳಿ ಇಬ್ಬರಿಗೂ ಮದುವೆಯಾಗಿತ್ತು.ತಾನಾಯ್ತಯ ತನ್ನ ಮಕ್ಕಳಾಯ್ತು ಅಂತಾ ಇದ್ದಿದ್ದರೆ ಇವತ್ತು ಹಬೀಬಾಗೆ ಇಂತಹ ಸ್ಥಿತಿ ಬರ್ತಾ ಇರಲಿಲ್ಲ.ಆತನೂ ಅಷ್ಟೇ ಮದುವೆಯಾಗಿ ಮನೆಯಲ್ಲಿ ಹೆಂಡತಿ ಮಕ್ಕಳಿದ್ದು.ಕುಟುಂಬದ ಜೊತೆಗೆ ಇದ್ದಿದ್ದರೆ ಇವತ್ತು ಜೈಲು ಸೇರೋ ಪರಿಸ್ಥಿತಿ ಬರ್ತಾ ಇರ್ಲಿಲಿಲ್ಲ.
 
 

Share this Story:

Follow Webdunia kannada

ಮುಂದಿನ ಸುದ್ದಿ

ಫ್ಲವರ್ ಶೋಗೆ ಸಜ್ಜುಗೊಳ್ಳುತ್ತಿದೆ ಸಸ್ಯಕಾಶಿ....!