Select Your Language

Notifications

webdunia
webdunia
webdunia
webdunia

ಫ್ಲವರ್ ಶೋಗೆ ಸಜ್ಜುಗೊಳ್ಳುತ್ತಿದೆ ಸಸ್ಯಕಾಶಿ....!

ಫ್ಲವರ್ ಶೋಗೆ ಸಜ್ಜುಗೊಳ್ಳುತ್ತಿದೆ ಸಸ್ಯಕಾಶಿ....!
bangalore , ಸೋಮವಾರ, 16 ಜನವರಿ 2023 (18:33 IST)
ಬೆಂಗಳೂರು ಕೋಟ್ಯಾಂತರ ಜನರ ಕರ್ಮಭೂಮಿ.ಆದ್ರೇ ಬೆಂಗಳೂರಲ್ಲಿ ವಾಸಿಸೋ ಮಂದಿಗೆ ರಾಜಧಾನಿ ಇತಿಹಾಸ,ಪರಂಪರೆ ಬಗ್ಗೆ ಗೊತ್ತಿಲ್ಲ‌.ಈ ನಿಟ್ಟಿನಲ್ಲಿ ಕೆಂಪೇಗೌಡರ ಬೆಂಗಳೂರನ್ನು  ಹೂಗಳ ಮೂಲಕ ತೋರಿಸೋಕೆ ತೋಟಗಾರಿಕೆ ಇಲಾಖೆ ಮುಂದಾಗಿದೆ.ಪ್ರತಿವರ್ಷದಂತೆ ಈ ವರ್ಷವೂ ಗಣರಾಜ್ಯೋತ್ಸವದ ಅಂಗವಾಗಿ  ಜನೇವರಿ 20 ರಿಂದ 30 ರವರಗೆ
ಫಲಪುಷ್ಪ ಪ್ರದರ್ಶನವನ್ನು ತೋಟಗಾರಿಕೆ ಇಲಾಖೆ ಹಮ್ಮಿಕೊಂಡಿದೆ.ನಗರದ ಲಾಲ್‌ಬಾಗ್‌ ನಲ್ಲಿ 213 ನೇ ಫ್ಲವರ್ ಶೋ ಆಯೋಜಿಸಲಾಗಿದೆ.ಈ ಪ್ರದರ್ಶನವನ್ನು ಜನವರಿ 20 ರಂದು ಬೆಳಗ್ಗೆ 10 ಗಂಟೆಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ.ಈ ಬಾರಿಯ ಫ್ಲವರ್ ಶೋಗೆ ಎರಡರಿಂದ ಮೂರು ಕೋಟಿ ರೂಪಾಯಿ ವೆಚ್ಚ ತಗುಲಲಿದೆ ಅಂತಾ ಅಂದಾಜಿಸಲಾಗಿದೆ.ಈ ಪ್ರದರ್ಶನದ ಪ್ರಮುಖ ಥೀಮ್ ಅಂದ್ರೇ ಬೆಂಗಳೂರು ನಗರ ಇತಿಹಾಸ ದರ್ಶನ ಎಂದು ತೋಟಗಾರಿಕೆ ಮತ್ತು ಯೋಜನೆ,ಸಂಯೋಜನೆ ಮತ್ತು ಸಾಂಖ್ಯಿಕ ಸಚಿವ ಮುನಿರತ್ನ ತಿಳಿಸಿದ್ರು.
ಇನ್ನೂ ಬೆಂಗಳೂರು ಇತಿಹಾಸದ ಪ್ರತಿಬಿಂಬವಾಗಿ ದುರ್ಗ,ಲಾಲ್ ಬಾಗ್ ಬಂಡೆ,ವರ್ಟಿಕಲ್ ಗಾರ್ಡನ್ ರೂಪದಲ್ಲಿ ಗಡಿ ಗೋಪುರ,ಕಾಡುಮಲ್ಲೇಶ್ವರ ದೇವಾಲಯ, ಟಿಪ್ಪುವಿನ ಬೇಸಿಗೆ ಅರಮನೆ,ಹೈಕೋರ್ಟ್, ಬೆಂಗಳೂರು ಅರಮನೆ,ವಿಧಾನಸೌಧದ ಕಲಾಕೃತಿಗಳು ಬಣ್ಣ ಬಣ್ಣದ ಹೂಗಳ ನಡುವೆ ಅರಳಲಿವೆ.ಈ ಬಾರಿ  ಒಟ್ಟು112 ಪುಷ್ಪ ಡೋಮ್ ಗಳ ಪ್ರದರ್ಶನವಿದ್ದು,ಹಾಲೆಂಡ್,ಕೊಲಂಬಿಯಾ, ಇಸ್ರೇಲ್, ಚಿಲಿ,ನೆದರ್ ಲ್ಯಾಂಡ್ಸ್,ಬೆಲ್ಜಿಯಂ, ಕೀನ್ಯಾ,ಆಸ್ಟ್ರೇಲಿಯಾ,ಯಥೋಪಿಯಾ ಸೇರಿದಂತೆ 11 ವಿದೇಶಗಳ 65 ಜಾತಿಯ  ಹೂಗಳನ್ನು ಪ್ರದರ್ಶಿಸಲಾಗುತ್ತಿದೆ.ಅಷ್ಟೇ ಅಲ್ಲದೇ ಡಾರ್ಜಿಲಿಂಗ್ ನ ಸಿಂಬಡಿಯ ಆರ್ಕಿಡ್ಸ್ ಹೂವು ಈ ಬಾರಿಯ ಮೇನ್ ಅರ್ಟ್ರಾಕ್ಷನ್ ಆಗಿದೆ.ಇನ್ನೂ ತೋಟಗಾರಿಕೆ ಇಲಾಖೆ ವತಿಯಿಂದಲೇ 6 ಲಕ್ಷ ಹೂವಿನ ಕುಂಡಗಳನ್ನು ಪ್ರದರ್ಶಿಸಲಾಗುತ್ತಿದೆ ಎಂದು ತೋಟಗಾರಿಕೆ ಸಚಿವರು ತಿಳಿಸಿದ್ರು.
ಇನ್ನೂ  ಟಿಕೆಟ್ ದರವನ್ನು ಹೆಚ್ಚಿಸಲಾಗಿಲ್ಲ.ವಯಸ್ಕರಿಗೆ ಸಾಮಾನ್ಯ ದಿನಗಳಲ್ಲಿ 70 ರೂಪಾಯಿ, ರಾಜಾ ದಿನಗಳಲ್ಲಿ 75 ರೂಪಾಯಿ ನಿಗದಿ ಮಾಡಲಾಗಿದೆ.ಇನ್ನೂ 12 ವರ್ಷ ಒಳಗಿನ ಮಕ್ಕಳಿಗೆ ಎಲ್ಲಾ ದಿನಗಳಲ್ಲಿ 30 ರೂಪಾಯಿ ಫಿಕ್ಸ್ ಮಾಡಲಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ನಾಲ್ಕು ಗೇಟ್ ಗಳಲ್ಲಿಯೂ ಟಿಕೆಟ್ ಕೌಂಟರ್ ವ್ಯವಸ್ಥೆ ಹಾಗೂ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.ಈ ಬಾರಿಯ ಫಲಪುಷ್ಪ ಪ್ರದರ್ಶನಕ್ಕೆ ಸುಮಾರು 10-12  ಲಕ್ಷಕ್ಕೂ ಹೆಚ್ಚು ಜನ ಬರುವ ನಿರೀಕ್ಷೆ ಇದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜ.21ರಿಂದ 29ರವರೆಗೆ ಬಿಜೆಪಿಯ ವಿಜಯ ಸಂಕಲ್ಪ ಅಭಿಯಾನ; ಅಶ್ವತ್ಥ ನಾರಾಯಣ