ರಸ್ತೆ ಸುರಕ್ಷತಾ ಸಪ್ತಾಹ ರ್ಯಾಲಿ ಕಾರ್ಯಕ್ರಮದ ಮೂಲಕ ಸಾರ್ವಜನಿಕರಲ್ಲಿ ಮತ್ತು ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಒಂದು ಕಾರ್ಯಕ್ರಮ ಕಬ್ಬನ್ ಪಾರ್ಕ್ನಲ್ಲಿ ಆಯೋಜನೆ ಮಾಡಲಾಗಿತ್ತು.ಕಾರ್ಯಕ್ರಮದಲ್ಲಿ ಸಾವಿರಾರು ಮಕ್ಕಳು ಭಾಗಿಯಾಗಿದ್ರು.
ಈ ವೇಳೆ ಕಾರ್ಯಕ್ರಮದಲ್ಲಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಹೆಲ್ಮೆಟ್ ಹಾಕಿಕೊಳ್ಳೋದು ನಮ್ಮ ಸುರಕ್ಷತೆಗಾಗಿ ಆಗ ನಾವೆಲ್ಲರು ಸುರಕ್ಷಿತರಾಗಿರ್ತೇವೆ.ಮಕ್ಕಳನ್ನು ಶಾಲೆಗೆ ಬಿಡುವಾಗ ಅಪಘಾತವಾಗುತ್ತಿದೆ.ಇಂತಹ ಪ್ರಕರಣ ತಿಂಗಳಿಗೆ ಒಂದೆರಡು ನೋಡ್ತಿರ್ತೇವೆ.ಹತ್ತಿರ ಇದೆ ಅಂತ ಒನ್ ವೇ ನಲ್ಲಿ ಹೋಗಬಾರದು.ಮಕ್ಕಳು ತಮ್ಮ ಪೋಷಕರಲ್ಲಿಯೂ ಜಾಗೃತಿ ಮೂಡಿಸಬೇಕು.ಎಲ್ಲರು ನಿಯಮ ಪಾಲನೆ ಮಾಡಿದರೆ ಅಪಘಾತ ಕಡಿಮೆ ಮಾಡಬಹುದು.ಬೆಂಗಳೂರಲ್ಲಿ ಟ್ರಾಫಿಕ್ ಮ್ಯಾನೆಜ್ ಮೆಂಟ್ ಚನ್ನಾಗಿ ಆಗಿದೆ ಎಂದು ಎಲ್ಲಾ ಸಿಬ್ಬಂದಿಗೆ ಕಮಿಷನರ್ ಅಭಿನಂದನೆ ಸಲ್ಲಿಸಿದಾರೆ .
ಇನ್ನೂ ಕಾರ್ಯಕ್ರಮದಲ್ಲಿ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ , ವಿಶೇಷ ಟ್ರಾಫಿಕ್ ಕಮೀಷನರ್ ಸಲೀಂ , ಎಂ ಎನ್ ಅನುಚೇತ್ ಜಂಟಿ ಪೊಲೀಸ್ ಆಯುಕ್ತ ಸಂಚಾರ ವಿಭಾಗದವರು ಭಾಗಿಯಾಗಿದ್ರು.