Select Your Language

Notifications

webdunia
webdunia
webdunia
webdunia

ಬಿಜೆಪಿ ಶಾಸಕನ ತಲೆಯಲ್ಲಿ ಜ್ಞಾನವೇ ಇಲ್ಲ ಎಂದ ಮಾಜಿ ಸಚಿವ!

BJP MLA
ಆ ಜನಪ್ರತಿನಿಧಿಯಿಂದ 6 ಕೋಟಿ ವೆಚ್ಚದ ಬಸ್ ನಿಲ್ದಾಣ ಕಾಮಗಾರಿ ತಡೆ ಹಿಡಿಯಲಾಗಿದೆ. ವಿನಾಕಾರಣ ಅಧಿಕಾರಿಗಳಿಗೆ ಕಾಮಗಾರಿ ಬದಲಾಯಿಸಲು ಸೂಚನೆ ನೀಡಲಾಗುತ್ತಿದೆ. ಅಷ್ಟಕ್ಕೂ ಆ ಶಾಸಕನ ತಲೆಯಲ್ಲಿ ಜ್ಞಾನವೇ ಇಲ್ಲ. ಹೀಗಂತ ಹಾಲಿ ಶಾಸಕರ ವಿರುದ್ಧ ಮಾಜಿ ಸಚಿವ ಕಿಡಿಕಾರಿದ್ದಾರೆ.

 

ಹೊಳಲ್ಕೆರೆ ಬಿಜೆಪಿ ಶಾಸಕ ಎಂ.ಚಂದ್ರಪ್ಪಗೆ ತಲೆಯಲ್ಲಿ ಜ್ಞಾನವೇ ಇಲ್ಲ. ಹೀಗಂತ ಚಿತ್ರದುರ್ಗ ನಗರದಲ್ಲಿ ಮಾಜಿ ಸಚಿವ ಹೆಚ್.ಆಂಜನೇಯ ಹೇಳಿಕೆ ನೀಡಿದ್ದಾರೆ. 6 ಕೋಟಿ ವೆಚ್ಚದ ಬಸ್ ನಿಲ್ದಾಣ ಕಾಮಗಾರಿ ತಡೆ ಹಿಡಿಯಲಾಗಿದೆ. ವಿನಾಕಾರಣ ಅಧಿಕಾರಿಗಳಿಗೆ ಕಾಮಗಾರಿ ಬದಲಾಯಿಸಲು ಸೂಚನೆ ನೀಡಲಾಗುತ್ತಿದೆ. ಶಾಸಕ ಎಂ.ಚಂದ್ರಪ್ಪಗೆ ಅದೊಂದು ದೊಡ್ಡ ಖಾಯಿಲೆಯಾಗಿಬಿಟ್ಟಿದೆ ಎಂದು ದೂರಿದ್ದಾರೆ.

ಅವರಿಗೆ ಶಕ್ತಿ, ಜ್ಞಾನ ಇದ್ದರೆ ಹೊಸ ಯೋಜನೆ ತರಲಿ ಎಂದು ಸವಾಲು ಹಾಕಿದ್ದಾರೆ. ನಾವು ತಂದಿರುವ ಯೋಜನೆಗಳ ದಿಕ್ಕು ತಪ್ಪಿಸೋದು ಬೇಡ. ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆ ತಂದಿದ್ದೇವೆ. ಯೋಜನೆ ಫಲಾನುಭವಿಗಳಿಗೆ ತಲುಪುವಲ್ಲಿ ಶಾಸಕ ಚಂದ್ರಪ್ಪ ಅಡ್ಡಗಾಲು ಹಾಕಿದ್ದಾರೆ ಎಂದರು. ನನ್ನ ಅವಧಿಯ ಅಭಿವೃದ್ಧಿ ಕಾಮಗಾರಿ ತಡೆಯುವುದು ಬಿಡಬೇಕು. ಫಲಾನುಭವಿಗಳಿಗೆ ಯೋಜನೆ ತಲುಪಲು ಬಿಡಬೇಕು. ಇಲ್ಲವಾದಲ್ಲಿ ಶಾಸಕ ಎಂ.ಚಂದ್ರಪ್ಪ ವಿರುದ್ಧ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಹೆಚ್.ಆಂಜನೇಯ ಹೇಳಿದರು.



Share this Story:

Follow Webdunia kannada

ಮುಂದಿನ ಸುದ್ದಿ

ಐತಿಹಾಸಿಕ ವೆಸ್ಲಿ ಸೇತುವೆ ಮುಳುಗಡೆ