Select Your Language

Notifications

webdunia
webdunia
webdunia
webdunia

ಗೋವಾದಿಂದ ಬಂದವರಿಗೆ ಸಾಂಸ್ಥಿಕ ಕ್ವಾರಂಟೈನ್ ಇಲ್ಲ

ಗೋವಾದಿಂದ ಬಂದವರಿಗೆ ಸಾಂಸ್ಥಿಕ ಕ್ವಾರಂಟೈನ್ ಇಲ್ಲ
ವಿಜಯಪುರ , ಗುರುವಾರ, 21 ಮೇ 2020 (21:08 IST)
ಗೋವಾ ರಾಜ್ಯ ಹೊರತುಪಡಿಸಿ ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ ಜನರಿಗೆ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗುತ್ತಿದೆ.

ವಿವಿಧ ರಾಜ್ಯಗಳಿಂದ ಆಗಮಿಸಿದ ಒಟ್ಟು 17,626 ಜನರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ ಎಂದು ವಿಜಯಪುರ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ತಿಳಿಸಿದ್ದಾರೆ.

ಬೇರೆ ರಾಜ್ಯಗಳಿಂದ ಆಗಮಿಸಿದವರಲ್ಲಿ ಅಧಿಕೃತ ಪರವಾನಿಗೆ ಪಡೆದು 9987 ಹಾಗೂ ಪರವಾನಿಗೆ ಪಡೆಯದೆ 7639 ಜನರು ಜಿಲ್ಲೆಗೆ ಆಗಮಿಸಿದ್ದು, ಒಟ್ಟು 17,626 ಜನರು ಜಿಲ್ಲೆಗೆ ಆಗಮಿಸಿದ್ದು ಅವರೆಲ್ಲರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ. ನಗರ ಪ್ರದೇಶದಲ್ಲಿ 2,342 ಹಾಗೂ ಗ್ರಾಮಿಣ ಪ್ರದೇಶಗಳಲ್ಲಿ 15,285 ಜನರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ.

ಮುರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ 1,066, ವಿದ್ಯಾರ್ಥಿ ನಿಲಯಗಳಲ್ಲಿ 3,316, ಪ್ರೌಢಶಾಲೆಗಳಲ್ಲಿ 3,733, ಪ್ರಾಥಮಿಕ ಶಾಲೆಗಳಲ್ಲಿ 7,871, ಸಮುದಾಯ ಭವನಗಳಲ್ಲಿ 266, ಇತರ ಕಡೆಗಳಲ್ಲಿ 1,145 ಸೇರಿದಂತೆ 17,626 ಜನರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ ಎಂದಿದ್ದಾರೆ.

ಗೋವಾ ರಾಜ್ಯದಿಂದ ಬಂದವರನ್ನು ಮನೆಯಲ್ಲಿಯೇ ಕ್ವಾರಂಟೈನ್‍ಗೆ ಸೂಚಿಸಿದ್ದು, ಈವರೆಗೆ 2,911 ಜನರನ್ನು ಹೋಮ್‍ಕ್ವಾರಂಟೈನ್ ಮಾಡಲಾಗಿದೆ ಎಂದು ಡಿಸಿ ತಿಳಿಸಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಜನರ ಜೇಬಿಗೆ ಕತ್ತರಿ ಹಾಕುತ್ತಿದ್ದವರಿಗೆ ಲಕ್ಷಾಂತರ ರೂಪಾಯಿ ದಂಡ