Select Your Language

Notifications

webdunia
webdunia
webdunia
webdunia

ಕೊರಿಯರ್ ವಾಹನದಲ್ಲಿ ಗೋವಾ ಮದ್ಯ ಸಾಗಾಟ

ಕೊರಿಯರ್ ವಾಹನದಲ್ಲಿ ಗೋವಾ ಮದ್ಯ ಸಾಗಾಟ
ಕಾರವಾರ , ಶುಕ್ರವಾರ, 15 ಮೇ 2020 (17:19 IST)
ಕೊರಿಯರ್ ಕಂಟೇನರ್ ವಾಹನದಲ್ಲಿ ಅಕ್ರಮವಾಗಿ ಗೋವಾ ಮದ್ಯ ಸಾಗಿಸಲಾಗುತ್ತಿತ್ತು.

ಅಕ್ರಮವಾಗಿ ಸಾಗಿಸುತ್ತಿದ್ದ ಲಕ್ಷಾಂತರ ರೂ. ಮೌಲ್ಯದ ಗೋವಾ ಮದ್ಯವನ್ನು ಕಾರವಾರದ ಮಾಜಾಳಿ ಚೆಕ್ ಪೋಸ್ಟ್ ನಲ್ಲಿ ಅಬಕಾರಿ ಸಿಬ್ಬಂದಿಗಳು ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿದ್ದಾರೆ.

 ತಮಿಳುನಾಡು ಮೂಲದ ಕಾರ್ತಿ ಪಡವೆಕನ್ ಹಾಗೂ ಕುಮಾರ್ ಜಯಕೊಡಿ ಬಂಧಿತರು. ಆರೋಪಿಗಳು ಗೋವಾದಿಂದ ಸೇಫ್ ಎಕ್ಸ್ಪ್ರೆಸ್‌ನ ಕೊರಿಯರ್ ಕಂಟೇನರ್ ವಾಹನದಲ್ಲಿ (ಕೆಎ 01 ಎಜಿ 8051) ಹನಿಗ್ರೇಡ್ ಬ್ರಾಂಡಿನ 180 ಬಾಟಲಿ ಹಾಗೂ ದಿ ಗ್ರೇಟ್ ಚೊಯ್ಸ್ ಎಕ್ಸಟ್ರಾ ಸ್ಟ್ರಾಂಗ್ ಬ್ರಾಂಡಿನ 180 ಬಾಟಲಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದರು.

ಮಾಜಾಳಿ ಚೆಕ್ ಪೋಸ್ಟ್ ನಲ್ಲಿ ಅಬಕಾರಿ ಸಿಬ್ಬಂದಿಗಳು ಕಂಟೇನರ್‌ನ್ನು ತಡೆದು ಪರಿಶೀಲಿಸಿದಾಗ 270 ಲೀಟರ್‌ನ ಅಂದಾಜು 1 ಲಕ್ಷದ 8 ಸಾವಿರ ಮೌಲ್ಯದ ಅಕ್ರಮ ಮದ್ಯ ಪತ್ತೆಯಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಮಾರುಕಟ್ಟೆಗೆ ಬಂದ ‘ಕೊಪ್ಪಳ ಮಾವು’ ಹೊಸ ಬ್ರ್ಯಾಂಡ್