Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ನಲ್ಲಿ ಆಂತರಿಕ ಕಚ್ಚಾಟ ನಡೆದಿದೆ- ಶೆಟ್ಟರ್ ಆರೋಪ

ಕಾಂಗ್ರೆಸ್ ನಲ್ಲಿ ಆಂತರಿಕ ಕಚ್ಚಾಟ ನಡೆದಿದೆ- ಶೆಟ್ಟರ್ ಆರೋಪ
bangalore , ಸೋಮವಾರ, 30 ಮೇ 2022 (20:20 IST)
ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯನವರ ನಡುವೆ ಯಾರು ಸಿಎಂ ಆಗಬೇಕು ಅಂತ ಆಂತರಿಕ ಕಚ್ಚಾಟ ಇದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಆರೋಪಿಸಿದರು.
ಡಿಕೆಶಿ ಮತ್ತು ಸಿದ್ದರಾಮಯ್ಯನವರ ಕಚ್ಚಾಟದಲ್ಲಿಯೇ ಕಾಂಗ್ರೆಸ್ ನಿರ್ನಾಮ ಆಗುತ್ತದೆ. ಕಾಂಗ್ರೆಸ್ ಪಕ್ಷದಲ್ಲಿ ಪಂಜಾಬ್ ದಲ್ಲಿ ಒಬ್ಬ ಸಿದ್ದು ಕರ್ನಾಟಕದಲ್ಲಿ ಒಬ್ಬ ಸಿದ್ಧು ಇದ್ದಾರೆ. ಇಬ್ಬರು ಸಿದ್ದುಗಳು ಕಾಂಗ್ರೆಸ್ ಅನ್ನ ನಿರ್ನಾಮ ಮಾಡ್ತಾರೆ ಅಂತ ನಾನು ಹಿಂದೆನೆ ಹೇಳಿದ್ದೆ. ಪಂಜಾಬ್ ದಲ್ಲಿ ಅದೇ ಸಿದ್ದು ಕಾಂಗ್ರೆಸ್ ಮುಗಿಸಿ ಜೈಲಿಗೆ ಹೋಗಿದ್ದಾನೆ. ಕರ್ನಾಟಕದಲ್ಲಿ ಡಿಕೆಶಿ ಸಭೆಯಲ್ಲಿ ಮುಂದಿನ ಮುಖ್ಯಮಂತ್ರಿ ಅಂತ ಘೋಷಣೆ ಮಾಡ್ತಾರೆ.
ಸಿದ್ದರಾಮಯ್ಯ ಸಭೆಯಲ್ಲಿ ಮುಂದಿನ ಮುಖ್ಯಮಂತ್ರಿ ಅಂತ ಘೋಷಣೆ ಮಾಡಿಕೊಳ್ತಾರೆ. ಈ ಬಗ್ಗೆ ಕಾಂಗ್ರೆಸ್ ನವರು ಯಾರನ್ನಾದರೂ ಮುಂದಿನ ಮುಖ್ಯಮಂತ್ರಿ ಅಂತ ಘೋಷಣೆ ಮಾಡಿದ್ರೆ ಅಂದೆ ಕಾಂಗ್ರೆಸ್ ನಿರ್ನಾಮ ಆಗುತ್ತದೆ. ಸಿದ್ಧರಾಮಯ್ಯನವರನ್ನು ಮುಂದಿನ ಮುಖ್ಯಮಂತ್ರಿ ಮಾಡೋದಿಲ್ಲ ಅಂತ ಹೇಳಿಬಿಡ್ಲಿ ಅವರು ಕಾಂಗ್ರೆಸ್ ಬಿಟ್ಟು ಹೋಗ್ತಾರೆ. ಇಲ್ಲೊಬ್ಬ ಸಿದ್ದು ಕೂಡ ಕಾಂಗ್ರೆಸ್ ನಿರ್ನಾಮ ಮಾಡೋದಕ್ಕೆ ಆರಂಭಿಸಿದ್ದಾನೆ ಎಂದು ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್ 3 ವರ್ಷ ಬದುಕುವುದೇ ಹೆಚ್ಚು: ವರದಿ!