Select Your Language

Notifications

webdunia
webdunia
webdunia
webdunia

ರಾಜ್ಯದಲ್ಲಿ ಮದ್ರಾಸ್ ಐ ಪ್ರಕರಣ ಏರಿಕೆ ಹೆಚ್ಚಾದ ಆತಂಕ

ರಾಜ್ಯದಲ್ಲಿ ಮದ್ರಾಸ್ ಐ ಪ್ರಕರಣ ಏರಿಕೆ ಹೆಚ್ಚಾದ ಆತಂಕ
bangalore , ಮಂಗಳವಾರ, 8 ಆಗಸ್ಟ್ 2023 (15:39 IST)
ನಗರದ ಸರ್ಕಾರಿ ಆಸ್ಪತ್ರೆಗಳಲ್ಲಿ 12 ದಿನಗಳಲ್ಲಿ 40,477 ಮದ್ರಾಸ್ ಐ ಪ್ರಕರಣ ದಾಖಲಾಗಿದೆ.ಕಳೆದ ಹತ್ತು ವರ್ಷದಲ್ಲಿ ಇದೇ ಪ್ರಥಮವಾಗಿ ಇಷ್ಟು ಪ್ರಮಾಣದಲ್ಲಿ ಕಣ್ಣಿನ ಸೋಂಕು ಹೆಚ್ವಳವಾಗಿದೆ.ರಾಜ್ಯದಲ್ಲಿ ಕೆಲವು ದಿನಗಳಿಂದ ಹವಾಮಾನ ವ್ಯತ್ಯಾಸದಿಂದ  ಕಣ್ಣಿನ ಸಮಸ್ಯೆ ಹೆಚ್ಚಳವಾಗಿದೆ.
 
ಜುಲೈ 25 ರಿಂದ ಆಗಸ್ಟ್ 4ರ ವರೆಗೆ ರಾಜ್ಯದಲ್ಲಿ 1,22,935 ಮಂದಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಕಣ್ಣಿನ ಹೊರರೋಗಿಗಳ ವಿಭಾಗದಲ್ಲಿ ಚಿಕಿತ್ಸೆ  ಪಡೆಯುತ್ತಿದ್ದಾರೆ.ಚಿಕಿತ್ಸೆ ಪಡೆದವರ ಪೈಕೆ  40,477 ಮದ್ರಾಸ್ ಐ ಪ್ರಕರಣಗಳು ದೃಡಪಟ್ಟಿದೆ.ಬೆಂಗಳೂರಿಗರನ್ನು ಬೆಂಬಿಡದೆ ಮದ್ರಾಸ್ ಐ ಸಾಂಕ್ರಮಿಕ ರೋಗ ಕಾಡಲಾರಂಭಿಸಿದೆ.ಕಳೆದ 12 ದಿನಗಳಲ್ಲಿ ಬೆಂಗಳೂರು ನಗರದಲ್ಲಿ 145 ಪ್ರಕರಣಗಳು ದೃಡಪಟ್ಟಿದೆ.ಬೀದರ್ ಜಿಲ್ಲೆಯಲ್ಲಿ ಅತೀ ಹೆಚ್ಚು ( 7,693) ಮಂದಿಗೆ ಮದ್ರಾಸ್ ಐ ದೃಡಪಟ್ಟಿದೆ.ಬೀದರ್,ಹಾವೇರಿ, ರಾಯಚೂರು ಜಿಲ್ಲೆಗಳು ಮುಂಚುಣಿಯಲ್ಲಿದ್ದು ಜನರಲ್ಲಿ ಆತಂಕ ಹೆಚ್ಚಿದೆ.ಮದ್ರಾಸ್ ಐ ಮಕ್ಕಳನ್ನು ಟಾರ್ಗೆಟ್ ಮಾಡುತ್ತಿರುವ ಹಿನ್ನಲೆ ಪಾಲಕರು ಎಚ್ಚರಿಕೆ ವಹಿಸುವಂತೆ ಆರೋಗ್ಯ ಇಲಾಖೆಯಿಂದ ಸೂಚನೆ ನೀಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿದ ಬಿಬಿಎಂಪಿ ಗುತ್ತಿಗೆದಾರರ ಸಂಘದ ಸದಸ್ಯರು.