Select Your Language

Notifications

webdunia
webdunia
webdunia
webdunia

ಆರ್ ಆರ್ ನಗರದಲ್ಲಿ ಭಯದ ವಾತಾವರಣವಿದೆ- ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಕುಸುಮಾ

ಆರ್ ಆರ್ ನಗರದಲ್ಲಿ ಭಯದ ವಾತಾವರಣವಿದೆ- ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಕುಸುಮಾ
ಬೆಂಗಳೂರು , ಬುಧವಾರ, 11 ನವೆಂಬರ್ 2020 (11:10 IST)
ಬೆಂಗಳೂರು : ಆರ್ ಆರ್ ನಗರದಲ್ಲಿ ಭಯದ ವಾತಾವರಣವಿದೆ ಎಂದು ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಕುಸುಮಾ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಷೇತ್ರದಲ್ಲಿ ಜನ ಭಯ ಬಿಟ್ಟು ಹೊರಬರ್ಬೇಕು. ಜನಕ್ಕೆ ತಮ್ಮ ಸಮಸ್ಯೆ ಹೇಳುವಷ್ಟು ಧೈರ್ಯವಿಲ್ಲ . ಜನರಿಗೆ ಆ ಧೈರ್ಯ ಬರಬೇಕಿದೆ. ಸೋತರೂ ಕ್ಷೇತ್ರದ ಜನರ ಜೊತೆ ಇರ್ತೇನೆ. ಕಾಂಗ್ರೆಸ್ ಪಕ್ಷದಲ್ಲಿಯೇ ಮುಂದುವರಿಯುತ್ತೇನೆ. ನನ್ನ ಮೇಲೆ ಪ್ರೀತಿ ತೋರಿದ  ಜನತೆಗೆ ಧನ್ಯವಾದ. ಮುಂದೆ ಜನಪರ ಹೋರಾಟದಲ್ಲಿ ಭಾಗಿಯಾಗುವೆ ಎಂದು ತಿಳಿಸಿದ್ದಾರೆ.

ಹಾಗೇ ಜನಾದೇಶಕ್ಕೆ ತಲೆ ಬಾಗುತ್ತೇನೆ. ನಾನು ಜೀವನದಲ್ಲಿ ಸೋತು ಗೆದ್ದವಳು. ಈ ಚುನಾವಣೆಯಲ್ಲಿ ಸೋತಿರಬಹುದು. ಮುಂದೆ ಒಂದು ದಿನ ಗೆದ್ದೇ ಗೆಲ್ಲುತ್ತೇನೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಒಂದೇ ಮನೆಯಲ್ಲಿ 5ಜೋಡಿಗಳು ಮಾಡಿದ್ದೇನು?