ಅಲ್ಲಿ ನಾಮಪತ್ರ ಭರಾಟೆ, ಇಲ್ಲಿ ಬಣ್ಣದಾಟ ಸಡಗರ

Webdunia
ಸೋಮವಾರ, 25 ಮಾರ್ಚ್ 2019 (18:57 IST)
ರಾಜ್ಯದೆಲ್ಲೆಡೆ ಚುನಾವಣೆ ಕಾವು, ನಾಮಪತ್ರ ಸಲ್ಲಿಕೆ ಭರಾಟೆ ಜೋರಾಗಿದ್ರೆ, ವಾಣಿಜ್ಯ ನಗರಿಯಲ್ಲಿನ ಜನರು ಕೂಲ್ ಆಗಿ ರಂಗಪಂಚಮಿ ಬಣ್ಣದೋಕುಳಿಯಲ್ಲಿ ಮುಳುಗಿ ಸಂಭ್ರಮಪಟ್ಟರು.

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ‌ ಇಂದು ರಂಗಪಂಚಮಿ ಬಣ್ಣದೋಕುಳಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ನಗರದ ವಿವಿಧ ಬಡಾವಣೆಗಳಲ್ಲಿ ಓಕುಳಿ ಆಟವಾಡಿ ಜನರು ಸಂಭ್ರಮಿಸಿದರು. ನಗರದ ಹಲವು ಕಡೆ ಸಾಮೂಹಿಕ ಬಣ್ಣ ಆಚರಣೆ ಜೊತೆ ಡಿಜೆ ಹಾಡಿಗೆ ಸ್ಟೆಪ್ ಹಾಕಿ ಯುವಕರು ಜಖತ್ ಎಂಜಾಯ್ ಮಾಡಿದರು. ನಗರದಾದ್ಯಂತ ಹೋಳಿ ಸಂಭ್ರಮ ಕಳೆಗಟ್ಟಿತ್ತು. ಚಿಕ್ಕ ಚಿಕ್ಕ‌ ಮಕ್ಕಳು ಬಣ್ಣ ಎರಚಿಕೊಂಡು ಸಂಭ್ರಮಿಸಿದರು.

ಇನ್ನು ಹೋಳಿ ಹಬ್ಬದಂದು‌ ಯಾವುದೇ ಅಹಿತಕರ ಘಟ‌ನೆ‌ ನಡೆಯದಂತೆ ‌ಪೊಲೀಸ್‌ ಇಲಾಖೆ ಬಿಗಿ ಬಂದೋಬಸ್ತ್‌ ಕೈಗೊಂಡಿತ್ತು. ಹೋಳಿ ಹಿನ್ನೆಲೆಯಲ್ಲಿ ನಗರದಾದ್ಯಂತ ಮದ್ಯ ಮಾರಾಟ‌ವನ್ನು ಸಂಪೂರ್ಣವಾಗಿ ನಿಷೇಧಿಸಿತ್ತು. ಅವಳಿ ನಗರದ ಮಧ್ಯೆ ಸಂಚರಿಸುವ ಬಿಎಸ್ ಆರ್ ಟಿಸಿ ಬಸ್ ಸಂಚಾರ ರದ್ದುಗೊಳಿಸಲಾಗಿತ್ತು.

ಒತ್ತಾಯ ಪೂರ್ವಕ‌ ಬಣ್ಣ ಹಚ್ಚುವವರು ಹಾಗೂ ಬಲವಂತವಾಗಿ ವಾಹನ ನಿಲ್ಲಿಸಿ ವಂತಿಗೆ ಸಂಗ್ರಹಿಸುವವರ ವಿರುದ್ದ ಕಠಿಣ ಕ್ರಮ ತಗೆದುಕೊಳ್ಳುವದಾಗಿ ಪೊಲೀಸ್ ಇಲಾಖೆ ಎಚ್ವರಿಕೆ ನೀಡಿತ್ತು. ಹೀಗಾಗಿ ಶಾಂತಿಯುತವಾಗಿ ಬಣ್ಣದೋಕುಳಿ ನಡೆಯಿತು.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಗ್ರಹಾರದಲ್ಲಿ ಅಕ್ರಮ ಹೆಚ್ಚು ಬೆನ್ನಲ್ಲೇ, ಖಡಕ್ ಪೊಲೀಸ್ ಅಧಿಕಾರಿ ಎಂಟ್ರಿ, ಕೈದಿಗಳಿಗೆ ನಡುಕ

ಷಡ್ಯಂತ್ರ ಬಯಲು ಬೆನ್ನಲ್ಲೇ ಮಹತ್ವದ ಪ್ರಕಟಣೆ ಹೊರಡಿಸಿದ ಧರ್ಮಸ್ಥಳ

ರೇಷ್ಮೆ ಬದಲು ಪಾಲಿಸ್ಟರ್ ಶಾಲು ತಿರುಪತಿ ದೇವಸ್ಥಾನದಲ್ಲಿ ಏನಿದು ಹಗರಣ

ಐಪಿಎಲ್ ಪಂದ್ಯವನ್ನು ಬೆಂಗಳೂರಿನಿಂದ ಹೊರಗೆ ಹೋಗಲು ಬಿಡುವುದಿಲ್ಲ: ಶಿವಕುಮಾರ್‌

ದ್ವೇಷ ಭಾಷಣ ಕಾರುವವರಿಗೆ ಮುಂದೈತೆ ಮಾರಿಹಬ್ಬ: ವಿಧಾನಸಭೆಯಲ್ಲಿ ಮಂಡನೆಯಾಯ್ತು ಪ್ರತಿಬಂಧಕ ಮಸೂದೆ

ಮುಂದಿನ ಸುದ್ದಿ
Show comments