Publish Date: Tue, 12 Mar 2019 (13:47 IST)
Updated Date: Tue, 12 Mar 2019 (13:52 IST)
ರೈತರ ಕೈಗೆ ಸೇರಬೇಕಿದ್ದ ಸಾಲದ ಪ್ರಮಾಣ ಪತ್ರಗಳು ಕಸದ ತೊಟ್ಟಿಯಲ್ಲಿ ಪತ್ತೆಯಾಗಿವೆ.
ರೈತರ ಸಾಲ ಪತ್ರಗಳು ಕಸದಲ್ಲಿ ಪತ್ತೆಯಾದ ಘಟನೆ ನಡೆದಿದೆ. ಬೆಂಗಳೂರು ಪೂರ್ವ ತಾಲೂಕಿನ ಮಂಡೂರು ಗ್ರಾಮದ ಕಸದ ತೊಟ್ಟಿಯಲ್ಲಿ ಪತ್ತೆಯಾಗಿವೆ. ನೂರಕ್ಕೂ ಹೆಚ್ಚು ರೈತರ ಸಾಲದ ಪ್ರಮಾಣ ಪತ್ರ ಹಾಗು ಆಧಾರ್ ಕಾರ್ಡ್ ಗಳು ಕಸದಲ್ಲಿ ಪತ್ತೆಯಾಗಿವೆ.
ಮಂಡೂರು ಅಂಚೆ ಕಚೇರಿ ಸಿಬ್ಬಂದಿ ರೈತರಿಗೆ ತಲುಪಿಸದೆ ಕಸದ ತೊಟ್ಟಿಗೆ ಎಸೆದಿರುವ ಅನುಮಾನ ಜನರಿಗೆ ವ್ಯಕ್ತವಾಗಿದೆ. ಅಂಚೆ ಕಚೇರಿ ಸಿಬ್ಬಂದಿಯ ವಿರುದ್ದ ಗ್ರಾಮಸ್ಥರು ಕೆಂಡಾಮಂಡಲರಾಗಿದ್ದಾರೆ.