Select Your Language

Notifications

webdunia
webdunia
webdunia
webdunia

ಶೃಂಗೇರಿ ಶಾರದಾಂಬೆಯ ದರ್ಶನಕ್ಕೆ ಬರುವವರಿಗೆ ವಸ್ತ್ರಸಂಹಿತೆ ಜಾರಿ, ಹೀಗಿದ್ದರೆ ಅಷ್ಟೇ ದೇವಸ್ಥಾನಕ್ಕೆ ಪ್ರವೇಶ

ಶೃಂಗೇರಿ ಶಾರದಾಂಬೆಯ ದರ್ಶನಕ್ಕೆ ಬರುವವರಿಗೆ ವಸ್ತ್ರಸಂಹಿತೆ ಜಾರಿ, ಹೀಗಿದ್ದರೆ ಅಷ್ಟೇ ದೇವಸ್ಥಾನಕ್ಕೆ ಪ್ರವೇಶ

Sampriya

ಚಿಕ್ಕಮಗಳೂರು , ಶನಿವಾರ, 20 ಜುಲೈ 2024 (15:13 IST)
Photo Courtesy X
ಚಿಕ್ಕಮಗಳೂರು: ಆ.15ರಿಂದ ಶೃಂಗೇರಿಯ ಶಾರದಾಮ್ಮನವರ ದರ್ಶನಕ್ಕಾಗಿ ಬರುವ ಭಕ್ತಾಧಿಗಳು ಭಾರತೀಯ ಸಂಪ್ರಾದಾಯಿಕ ವಸ್ತ್ರಗಳನ್ನು ಧರಿಸುವುದು ಕಡ್ಡಾಯ ಮಾಡಲಾಗಿದೆ.

ಈ ಸಂಬಂಧ ದೇವಾಲಯ ಹಾಗೂ ಶೃಂಗೇರಿ ಮಠದ ಆಡಳಿತಾಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಲಾಗಿದೆ. .

ದೇವಾಲಯ ಪ್ರವೇಶಿಸುವವರು ಸಂಪ್ರದಾಯಬದ್ಧ ಭಾರತೀಯ ಧಿರಿಸಿನಲ್ಲಿದ್ದರೆ ಮಾತ್ರ ಹತ್ತಿರದಿಂದ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ೊಂದು ವೇಳೆ ಭಾರತೀಯ ಸಾಂಪ್ರದಾಯಿಕವಲ್ಲದ ಉಡುಗೆಯನ್ನು ತೊಟ್ಟು ಬಂದವರಿಗೆ ಅರ್ಧಮಂಟಪದ   ಹೊರಭಾಗದಲ್ಲಿ ನಿಂತು ದೇವರ ದರ್ಶನ ಪಡೆಯಬೇಕಾಗುತ್ತದೆ ಅವರಿಗೆ ಒಳ ಭಾಗದಲ್ಲಿರುವ ಪರಿಕ್ರಮಕ್ಕೆ
ಪ್ರವೇಶವಿರುವುದಿಲ್ಲ ಎಂದು ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.

ವಸ್ತ್ರಸಂಹಿತೆ ಹೀಗಿದೆ: ಪುರುಷರು ಧೋತಿ, ಶಲ್ಯ, ಉತ್ತರೀಯ (ಅಂಗವಸ್ತ್ರ) ಮಹಿಳೆಯರು ಸೀರೆ, ಸಲ್ವಾರ್, ದುಪಟ್ಟಾ, ಲಂಗಾ ದಾವಣಿ ಧರಿಸಿ ದೇವಾಲಯವನ್ನು ಪ್ರವೇಶಿಸಬಹುದಾಗಿದೆ.

ಈ ಹಿಂದೆ ಶ್ರೀಮಠದ ಗುರು ನಿವಾಸದಲ್ಲಿ ಗುರುಗಳ ದರ್ಶನ ಪಡೆಯುವುದಕ್ಕೆ ವಸ್ತ್ರ ಸಂಹಿತೆ ಜಾರಿಯಲ್ಲಿತ್ತು ಈಗ ಆ.15 ರಿಂದ ದೇವಾಲಯಕ್ಕೆ ಭೇಟಿ ನೀಡುವ ಭಕ್ತಾದಿಗಳಿಗೂ ವಸ್ತ್ರ ಸಂಹಿತೆ ಕಡ್ಡಾಯವಾಗಿ ಜಾರಿಯಾಗಲಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಸರ್ಕಾರಿ ಶಾಲೆಯ ಮಕ್ಕಳಿಗೆ ಇನ್ಮುಂದೆ ವಾರದಲ್ಲಿ ನಾಲ್ಕು ದಿನ ಮೊಟ್ಟೆ: ಸಿಎಂ ಸಿದ್ದರಾಮಯ್ಯ