Select Your Language

Notifications

webdunia
webdunia
webdunia
webdunia

ಹೊಸ ಸಂಸತ್ ಭವನದಲ್ಲಿ ಸಿಬ್ಬಂದಿಗೆ ನೂತನ ಡ್ರೆಸ್ ಕೋಡ್

ಹೊಸ ಸಂಸತ್ ಭವನದಲ್ಲಿ ಸಿಬ್ಬಂದಿಗೆ ನೂತನ ಡ್ರೆಸ್ ಕೋಡ್
ನವದೆಹಲಿ , ಬುಧವಾರ, 13 ಸೆಪ್ಟಂಬರ್ 2023 (13:13 IST)
ನವದೆಹಲಿ : ಸೆಪ್ಟೆಂಬರ್ 18-22 ರವರೆಗೂ ಸಂಸತ್ನ ವಿಶೇಷ ಅಧಿವೇಶನ ನಡೆಯಲಿದ್ದು ಇದೇ ಸಮಯದಲ್ಲಿ ಸಿಬ್ಬಂದಿಯ ಸಮವಸ್ತ್ರ ಬದಲಾವಣೆಗೂ ಸರ್ಕಾರ ನಿರ್ಧರಿಸಿದೆ.

ಸೆಪ್ಟೆಂಬರ್ 18 ರಂದು ಅಧಿವೇಶನ ಪ್ರಾರಂಭವಾಗಲಿದ್ದು, ಸೆಪ್ಟೆಂಬರ್ 19 ರಂದು ಗಣೇಶ ಚತುರ್ಥಿಯ ದಿನದಂದು ಸಣ್ಣ ಪೂಜೆಯ ಬಳಿಕ ಹೊಸ ಸಂಸತ್ ಭವನಕ್ಕೆ ಔಪಚಾರಿಕ ಪ್ರವೇಶ ನಡೆಯಲಿದೆ.

ಹೊಸ ಸಂಸತ್ನಲ್ಲಿ ಹೊಸ ಡ್ರೆಸ್ ಕೋಡ್ನೊಂದಿಗೆ ಸಿಬ್ಬಂದಿ ಕಾಣಿಸಿಕೊಳ್ಳಲಿದ್ದಾರೆ ಎಂದು ಮೂಲಗಳು ಹೇಳಿವೆ. ಸಂಸತ್ ಭವನದ ಸಿಬ್ಬಂದಿ ಗಾಢ ಗುಲಾಬಿ ಬಣ್ಣದ ನೆಹರು ಜಾಕೆಟ್ ಮತ್ತು ಖಾಕಿ ಬಣ್ಣದ ಪ್ಯಾಂಟ್ ಧರಿಸಲಿದ್ದಾರೆ. ಇವರು ಧರಿಸಲಿರುವ ಶರ್ಟ್ ಕಮಲದ ಹೂವಿನ ಶೈಲಿಯಲ್ಲಿ ವಿನ್ಯಾಸಗೊಳಿಸಿದೆ. ಈ ಸಮವಸ್ತ್ರವನ್ನು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿ (ಎನ್ಐಎಫ್ಟಿ) ರಚಿಸಿದೆ.

ಉಭಯ ಸದನಗಳಲ್ಲಿನ ಮಾರ್ಷಲ್ಗಳ ಉಡುಗೆಯನ್ನೂ ಬದಲಾಯಿಸಲಾಗಿದೆ. ಅವರು ಮಣಿಪುರಿ ಪೇಟವನ್ನು ಧರಿಸಲಿದ್ದಾರೆ. ಸಂಸತ್ ಭವನದ ಭದ್ರತಾ ಸಿಬ್ಬಂದಿಯ ಉಡುಗೆಯೂ ಬದಲಾಗಲಿದ್ದು, ಸಫಾರಿ ಸೂಟ್ಗಳ ಬದಲಿಗೆ, ಅವರಿಗೆ ಮಿಲಿಟರಿ ಉಡುಪು ಹೋಲುವ ಬಟ್ಟೆಯನ್ನು ನೀಡಲಾಗುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಸರ್ಕಾರದ ವಿರುದ್ಧ ಹೋರಾಟಕ್ಕೆ ಮೈತ್ರಿ ಅನಿವಾರ್ಯ: ಬಸವರಾಜ ಬೊಮ್ಮಾಯಿ