Select Your Language

Notifications

webdunia
webdunia
webdunia
webdunia

ಆಸ್ಪತ್ರೆಯಲ್ಲಿ ನವಜಾತ ಶಿಶು ಕಳ್ಳತನ

ಆಸ್ಪತ್ರೆಯಲ್ಲಿ ನವಜಾತ ಶಿಶು ಕಳ್ಳತನ
ಚಿಕ್ಕೋಡಿ , ಬುಧವಾರ, 21 ಸೆಪ್ಟಂಬರ್ 2022 (14:48 IST)
ಚಿಕ್ಕೋಡಿ  : ಅಪರಿಚಿತ ಮಹಿಳೆಯೊಬ್ಬಳು ನರ್ಸ್ ವೇಷದಲ್ಲಿ ಬಂದು ನವಜಾತ ಶಿಶುವನ್ನು ತಾಯಿ ಮಡಿಲಿನಿಂದ ಕಳ್ಳತನ ಮಾಡಿ ಪರಾರಿಯಾದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

ಬೆಳಗಾವಿ ಜಿಲ್ಲೆಯ ಅಥಣಿ ಸರ್ಕಾರಿ ಆಸ್ಪತ್ರೆಯಲ್ಲಿ ನಿನ್ನೆ ರಾತ್ರಿ ಗಂಡು ನವಜಾತ ಶಿಶುವೊಂದು ಜನಿಸಿತ್ತು. ನರ್ಸ್ ವೇಷದಲ್ಲಿ ಆಸ್ಪತ್ರೆಗೆ ಎಂಟ್ರಿ ಕೊಟ್ಟ ಅಪರಿಚಿತ ಮಹಿಳೆಯೊಬ್ಬಳು ಮಗುವನ್ನು ತೂಕ ಮಾಡಿಸಬೇಕು ಎಂದು ಹೇಳಿ ತಾಯಿ ಮಡಿಲಿನಿಂದ ಕಳ್ಳತನ ಮಾಡಿ ಪರಾರಿಯಾಗಿದ್ದಾಳೆ.

ಇತ್ತ ಅರ್ಧ ಘಂಟೆ ಕಳೆದರೂ ಮಗು ತಂದು ಕೊಡದ ನರ್ಸ್ ಬಗ್ಗೆ ಅನುಮಾನಗೊಂಡಿದ್ದಾರೆ. ಇದರಿಂದ ಪೋಷಕರು ಗಾಬರಿಗೊಂಡಾಗ ಆಸ್ಪತ್ರೆ ಸಿಬ್ಬಂದಿ ಎಚ್ಚೆತ್ತು ಅಥಣಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಅಥಣಿ ಪಿಎಸ್ಐ ಶಿವಶಂಕರ ಮುಖರಿ ಮಗು ಕಳೆದುಕೊಂಡ ಪೋಷಕರಿಂದ ಮಾಹಿತಿ ಪಡೆದಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಹಿಜಬ್ ವಿರೋಧಿಸಿ ಇರಾನ್ನಲ್ಲಿ ಭುಗಿಲೆದ್ದ ಪ್ರತಿಭಟನೆ