Select Your Language

Notifications

webdunia
webdunia
webdunia
webdunia

ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ಯುವಕನಿಗೆ ಧರ್ಮದೇಟು

ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ಯುವಕನಿಗೆ ಧರ್ಮದೇಟು
ದಾವಣಗೆರೆ , ಸೋಮವಾರ, 4 ಜೂನ್ 2018 (19:41 IST)
ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ಯುವಕನಿಗೆ ಧರ್ಮದೇಟು ಬಿದ್ದಿದೆ. ವಾಟ್ಸ್ ಆಪ್, ಫೇಸ್‌ಬುಕ್‌ ನಲ್ಲಿ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ಯುವಕನಿಗೆ ಗೂಸಾ ನೀಡಲಾಗಿದೆ. 
ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣದಲ್ಲಿ ಯುವಕನಿಗೆ ಥಳಿಸುತ್ತಿರುವ ಯುವತಿಯರ ವಿಡಿಯೋ ವೈರಲ್ ಆಗಿದೆ. ನವ್ಯಜ್ಞಾನ ಜೋತಿ ಸಂಸ್ಥೆಯ ಯುವತಿಯೊಬ್ಬರಿಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ಯುವಕ. ತಾಲೂಕಿನ ಕಲ್ಲೇದೇವರಪುರ ಗ್ರಾಮದ ಯುವಕ ಪ್ರತಿನಿತ್ಯ ಫೇಸ್‌ಬುಕ್‌, ವಾಟ್ಸ್ ಆಪ್ ನಲ್ಲಿ ಮೆಸೇಜ್ ಕಳುಹಿಸುತ್ತಿದ್ದ ಎನ್ನಲಾಗಿದೆ. 
 
ಯುವತಿಗೆ ಬೇರೆಯವರ ಜೊತೆ ಅನೈತಿಕ ಸಂಬಂಧ ಕಲ್ಪಿಸಿ ಸಂದೇಶ ರವಾನಿಸುತ್ತಿದ್ದ ಯುವಕ ಕೃತ್ಯದಿಂದ ಬೇಸತ್ತ ಯುವತಿ ಗೂಸಾ ನೀಡಿದ್ದಾಳೆ. 
 
ಇದರಿಂದ ಮನನೊಂದು ಜಗಳೂರಿಗೆ ಬಂದು ಜಗಳೂರಿನ ಖಾಸಗಿ ಫೈನಾನ್ಸ್ ಕಂಪನಿಯಲ್ಲಿ ಕೆಲ್ಸಾ ಮಾಡ್ತಾ ಇದ್ದ ಯುವಕನನ್ನು ಕರೆಸಿ ಯುವತಿಯರು ಧರ್ಮದೇಟು ಕೊಟ್ಟು ಯುವಕನಿಗೆ ಸರಿಯಾಗಿ ಪಾಠ ಕಳಿಸಿದ್ದಾರೆ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಹಳಸಿದ ಹಾಗೂ ಹಸಿದವರ ಸರ್ಕಾರವಿದು: ಸಿಟಿ ರವಿ ಹೇಳಿಕೆ