ಮನೆಮಂದಿ ಶುಭಕಾರ್ಯಕ್ಕೆ ತೆರಳಿದ್ರು; ಆ ಯುವಕ ಯಮಲೋಕ ಸೇರಿದ!

Webdunia
ಸೋಮವಾರ, 18 ಫೆಬ್ರವರಿ 2019 (16:46 IST)
ಮನೆಮಂದಿ ಶುಭಕಾರ್ಯಕ್ಕೆ ತೆರಳಿದ್ದ ವೇಳೆಯಲ್ಲಿ ಯುವಕನೊಬ್ಬ ಸಾವಿನ ಮನೆ ಸೇರಿದ ಘಟನೆ ನಡೆದಿದೆ. ವ್ಯಕ್ತಿಯೊಬ್ಬರು ಮನೆಯ ಕೊಠಡಿಯೊಳಗೆ ನಾಡಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಸುಬ್ರಹ್ಮಣ್ಯದ ನಾಲ್ಕೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ.  ಜತ್ತಿಲ ಮನೆ ನಿವಾಸಿ ಪ್ರತಾಪ್(24) ಎಂಬವರು ಮನೆಯ ಕೊಠಡಿ ಒಳಗೆ ನಾಡಬಂದೂಕಿನಿಂದ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡವರು. ಕೃಷಿಕ ಜತ್ತಿಲ ಜನಾರ್ಧನ ಎಂಬುವರ ಪುತ್ರ ಬೆಂಗಳೂರಿನಲ್ಲಿ ಖಾಸಗಿ ಉದ್ಯೋಗದಲ್ಲಿದ್ದರು. ಇತ್ತೀಚೆಗೆ ಅವರು ತವರಿಗೆ ಮರಳಿದ್ದರು.

ಬಳಿಕ ಸ್ಥಳಿಯವಾಗಿ ಸ್ವ-ಉದ್ಯೋಗ ಆರಂಬಿಸಿದ್ದರು. ಮನೆಯಲ್ಲಿ ಯಾರು ಇರಲಿಲ್ಲ. ತಂದೆ ಮತ್ತು ತಾಯಿ ಇಬ್ಬರು ಸಂಬಂಧಿಕರ ಶುಭ ಕಾರ್ಯಕ್ರಮಗಳಿಗೆ ತೆರಳಿದ್ದರು. ಸಹೋದರ ಕೂಡ ಹೊರಗಡೆ ತೆರಳಿದ್ದ. ಮನೆಯಲ್ಲಿ ಯಾರು ಇಲ್ಲದ ವೇಳೆ ಅವರು ಬಂದೂಕಿನಿಂದ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯ ಸದಸ್ಯರು ಸಂಜೆ ಮನೆಗೆ ವಾಪಸ್ಸಾದ ವೇಳೆ ರಕ್ತದ ಮಡುವಿನಲ್ಲಿ ಪ್ರತಾಪ್ ಬಿದ್ದುಕೊಂಡಿದ್ದರು. ಪಕ್ಕದಲ್ಲೇ ಬಂದೂಕು ಕೂಡ ಕಂಡುಬಂದಿದೆ.

ರಕ್ತದ ಮಡುವಿನಲ್ಲಿದ್ದ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ಆದರೂ ಪ್ರಾಣ ಉಳಿಸಲು ಸಾಧ್ಯವಾಗಿಲ್ಲ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಲಕ್ಕುಂಡಿಯಲ್ಲಿ ಸಿಕ್ಕ ನಿಧಿ, ಇನ್ನು ಮುಂದಿನ ಕ್ರಮ ಹೇಗೆ ನಡೆಯುತ್ತದೆ ಗೊತ್ತಾ

ಸುಮಾರು ಒಂದು ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಮಾಡಿಸಿದ ಆನೆ, ಚಾರ್ಮಾಡಿಯಲ್ಲಿ ನಿಜವಾಗ್ಲೂ ಆಗಿದ್ದೇನು

Karnataka Weather: ಮುಂದಿನ 24 ಗಂಟೆಯ ಹವಾಮಾನ ಬದಲಾವಣೆ ಕೇಳಿದ್ರೆ ಶಾಕ್

ಮನೆ ಕಟ್ಟೋಣ ಎಂದು ವಿಚ್ಛೇಧಿತ ಮಹಿಳೆಗೆ ಕೈಕೊಟ್ಟ ಎರಡನೇ ಗಂಡ, ಆಗಿದ್ದೇನು ಗೊತ್ತಾ

ಕನ್ನಡ, ಕೇರಳ ಭಾಷಾ ವಿವಾದ: ಸಿಎಂ ಪಿಣರಾಯಿ ವಿಜಯನ್ ಪ್ರತಿಕ್ರಿಯೆ

ಮುಂದಿನ ಸುದ್ದಿ
Show comments