ಕಳ್ಳಿಯರಿಗೆ ಹಿಗ್ಗಾಮುಗ್ಗಾ ಥಳಿತ!

Webdunia
ಸೋಮವಾರ, 18 ಫೆಬ್ರವರಿ 2019 (16:41 IST)
ಚಾಲಾಕಿ ಕಳ್ಳಿಯರು ಮಾಡಬಾರದ ಕೆಲಸ ಮಾಡಿ ಸಿಕ್ಕಿಬಿದ್ದು ಜನರಿಂದ ಹಿಗ್ಗಾಮುಗ್ಗಾ ಥಳಿಸಿಕೊಂಡ ಘಟನೆ ನಡೆದಿದೆ.

ಬಸ್ ಪ್ರಯಾಣಿಕರ ಸೋಗಿನಲ್ಲಿ ಸರಗಳ್ಳತನ ಮಾಡುತ್ತಿದ್ದ ಕಳ್ಳಿಯರಿಗೆ ಬಸ್ ಪ್ರಯಾಣಿಕರೇ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಪಕ್ಷಿಕೆರೆ ಎಂಬಲ್ಲಿ ನಡೆದಿದೆ. ಮಂಗಳೂರು ಜಿಲ್ಲೆಯ ಪಕ್ಷಿಕೆರೆ ಗ್ರಾಮದ ಕೆಮ್ರಾಲ್ ನಿವಾಸಿ ರತ್ನಾ ಎಂಬ ಮಹಿಳೆ ಬಸ್ನಲ್ಲಿ ಸಂಚರಿಸಿ ಪಕ್ಷಿಕೆರೆ ಚರ್ಚ್ ಬಳಿ ಇಳಿಯಲು ಮುಂದಾದಾಗ ಸರಗಳ್ಳಿಯರು ಕುತ್ತಿಗೆಯಿಂದ ಸರ ಸೆಳೆದು ಪರಾರಿಯಾಗಲು ಯತ್ನಿಸಿದ್ದಾರೆ.

ವೇಳೆ ರತ್ನಾ ಬೊಬ್ಬೆ ಹಾಕಿದ್ದು ಸ್ಥಳೀಯ ರಿಕ್ಷಾ ಚಾಲಕರು ಪರಾರಿಯಾಗುತ್ತಿದ್ದ ಸರಗಳ್ಳಿಯರ ತಂಡದಲ್ಲಿದ್ದ ನಾಲ್ವರನ್ನು ಹಿಡಿದಿದ್ದಾರೆ. ಒಟ್ಟು ಸೇರಿದ ಸಾರ್ವಜನಿಕರು ಮಹಿಳೆಯರ ಮೇಲೆ ಹಿಗ್ಗಾಮುಗ್ಗಾ ಥಳಿಸಿ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.

ಮಹಿಳೆಯರು ಕನ್ನಡ, ಹಿಂದಿ ಭಾಷೆಯಲ್ಲಿ ಮಾತಾಡುತ್ತಿದ್ದು ಹೊರರಾಜ್ಯದವರು ಎಂದು ತಿಳಿದುಬಂದಿದೆ. ಇವರು ಭಾನುವಾರ ಬಸ್ನಲ್ಲಿ ರಶ್ ಹೆಚ್ಚಿರುವ ವೇಳೆ ವಿವಿಧ ಕಡೆಗಳಲ್ಲಿ ಬಸ್ಗಳಲ್ಲಿ ಸಂಚರಿಸಿ ಕಾರ್ಯಾಚರಣೆ ನಡೆಸುತ್ತಿದ್ದರು ಎನ್ನಲಾಗಿದೆ. ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಎಕ್ಸ್ ಪ್ರೆಸ್ ರೈಲು ಚೇಸ್ ಮಾಡಿ ಒಳಗಿದ್ದ ವ್ಯಕ್ತಿಯನ್ನು ಎಳೆದುಕೊಂಡು ಹೋದ ಚಿರತೆ: ಎದೆ ಝಲ್ಲೆನಿಸುವ ವಿಡಿಯೋ

ಯಾರು ಏನೇ ಹೇಳಿದ್ರೂ ಇದೊಂದು ಕಾರಣಕ್ಕೆ ರಾಷ್ಟ್ರ ರಾಜಕಾರಣ ಬೇಡ ಅಂತಾರೆ ಸಿದ್ದರಾಮಯ್ಯ

ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುವ ಮೊದಲು ಈ ಒಂದು ಕೆಲಸ ಮಾಡಲಿದ್ದಾರೆ ಸಿದ್ದರಾಮಯ್ಯ

ಸಿದ್ದರಾಮಯ್ಯ ಬಳಿ ರಾಜೀನಾಮೆ ಕೇಳಲು ರಾಹುಲ್ ಗಾಂಧಿ ಮನವೊಲಿಸಿದ ವ್ಯಕ್ತಿ ಯಾರೆಂದು ಬಯಲು

ಸಿಎಂ ಸ್ಥಾನಕ್ಕೆ ರಾಜೀನಾಮೆ ಸುದ್ದಿ ಬೆನ್ನಲ್ಲೇ ಇಂದು ಸಿದ್ದರಾಮಯ್ಯ, ಡಿಕೆಶಿ ಒಂದೇ ವೇದಿಕೆಯಲ್ಲಿ

ಮುಂದಿನ ಸುದ್ದಿ
Show comments