Publish Date: Tue, 27 Jun 2023 (18:58 IST)
Updated Date: Tue, 27 Jun 2023 (19:36 IST)
ಕಿಟಕಿಯಿಂದ ಬಸ್ ಹತ್ತುವಾಗ ಮಹಿಳೆ ಕೈ ತುಂಡು ಸುದ್ದಿ ಶುದ್ಧ ಸುಳ್ಳು ಎಂದು KSRTC ಸ್ಪಷ್ಟನೆ ನೀಡಿದೆ.
ವೈರಲ್ ಆದ ದೃಶ್ಯದ ಬಗ್ಗೆ KSRTC ಸ್ಪಷ್ಟನೆ ನೀಡಿದ್ದು, ಜಾಲತಾಣಗಳಲ್ಲಿ ಈ ವಿಡಿಯೋವನ್ನು ತಪ್ಪಾಗಿ ತೋರಿಸಲಾಗ್ತಿದೆ. ಮಂಡ್ಯ ಜಿಲ್ಲೆಯ ಹುಲ್ಲೇನಹಳ್ಳಿ ಬಳಿ ಕಿಟಕಿ ಮೂಲಕ ಹತ್ತುವ ವೇಳೆ ಮಹಿಳೆಯ ಕೈ ಮರಿದಿದೆ ಎಂದು ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿತ್ತು. ಅದು ತಪ್ಪು ಮಾಹಿತಿ. ಇದು ಲಾರಿ-ಬಸ್ ನಡುವೆ ಅಪಘಾತವಾಗಿದೆ. ಬಸವರಾಜಪುರದ ಹತ್ತಿರ ಎದುರು ದಿಕ್ಕಿನಿಂದ ಅತಿ ವೇಗ ಮತ್ತು ಅಜಾಗರೂಕತೆಯಿಂದ ಬಂದ, ಲಾರಿ ಚಾಲಕನು ಸಂಸ್ಥೆಯ ವಾಹನದ ಬಲ ಹಿಂಬದಿಯ ಕಿಟಕಿಯ ಬಳಿ ಡಿಕ್ಕಿಯಾಗಿದೆ. ಅಪಘಾತದಲ್ಲಿ ಕಿಟಕಿಗಳ ಬಳಿ ಇರುವ ಆಸನಗಳಲ್ಲಿ ಕುಳಿತಿದ್ದ ಮಹಿಳಾ ಪ್ರಯಾಣಿಕರಿಗೆ ತೀವ್ರ ಗಾಯಗಳಾಗಿವೆ. ಅಪಘಾತದಲ್ಲಿ ಹೆಚ್.ಡಿ. ಕೋಟೆ ತಾಲೂಕಿನ ಮಾಗುಡಿಲು ನಿವಾಸಿ ಶಾಂತಕುಮಾರಿ ಇವರ ಬಲಗೈ ತುಂಡಾಗಿದ್ದು. ನಂಜನಗೂಡು ಹುಲ್ಲಹಳ್ಳಿ ನಿವಾಸಿ ರಾಜಮ್ಮ ಇವರಿಗೆ ಬಲಗೈ ತೀವ್ರ ಗಾಯಗೊಂಡಿದ್ದಾರೆ. ಹಾಗೂ ಗಾಯಾಳುಗಳ ಸಂಪೂರ್ಣ ವೆಚ್ಚವನ್ನ KSRTCಯೇ ಬರಿಸಲಿದೆ ಎಂದು ತಿಳಿಸಿದೆ.