Publish Date: Tue, 27 Jun 2023 (17:58 IST)
Updated Date: Tue, 27 Jun 2023 (16:05 IST)
ಅಕ್ಕಿ ಬಗ್ಗೆ ಬಿಜೆಪಿ ಅಭಿಯಾನ ವಿಚಾರವಾಗಿ ಸಚಿವ ರಾಮಲಿಂಗರೆಡ್ಡಿ ಪ್ರತಿಕ್ರಿಯಿಸಿದ್ದು,ಬಿಜೆಪಿಯವರು ಪ್ರಚಾರ ಪ್ರಿಯರು.ಬಿಜೆಪಿಯವರ ಗೌರವಯುತವಾಗಿ ಇರುವವರು.ಚೆಷ್ಟೆ ಮಾಡಿದರೇ ಜನ ಪಾಠ ಕಲಿಸುತ್ತಾರೆ.ನಾನು ಯಡಿಯೂರಪ್ಪ, ಬೊಮ್ಮಾಯಿ, ಕಟೀಲ್ ಅವರಿಗೆ ಅವರ ಪ್ರಣಾಳಿಕೆ ಕಳಿಸುತ್ತೇನೆ.ಕೊಟ್ಟ ಭರವಸೆಗಳಲ್ಲಿ ಎಷ್ಟು ಈಡೇರಿಸಿದ್ದಾರೆ..ಉದ್ಯೋಗ ಕೊಡುತ್ತೇವೆ ಎಂದರು , ಐದಿನೈದು ಲಕ್ಷ ಕೊಡ್ತೇವೆ ಎಂದರು, ಕೊಡಲಿಲ್ಲ.ಬಿಜೆಪಿಯವರಿಂದ ನಾವು ಕಲಿಯಬೇಕಾಗಿಲ್ಲ ಎಂದು ರಾಮಲಿಂಗಾರೆಡ್ಡಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಶಕ್ತಿ ಯೋಜನೆಯಿಂದ ನಿಗಮಕ್ಕೆ ಶಕ್ತಿ ಬಂದಿದೆ.ನಿಗಮಗಳ ಆದಾಯ ಹೆಚ್ಚಳ ಆಗಿದೆ.ಸರ್ಕಾರಕ್ಕೆ ಶಕ್ತಿ ಬಂದಿದೆ, ಸಾರಿಗೆ ನಿಗಮಕ್ಕೂ ಶಕ್ತಿ ಬಂದಿದೆ.ನಮ್ಮ ಪಕ್ಷಕ್ಕು ಶಕ್ತಿ ಬಂದಿದೆ.ಇದರಿಂದ ಬಿಜೆಪಿಯವರು ನಿಷ್ಯಕ್ತರಾಗಿದ್ದಾರೆ.ಬಿಜೆಪಿಯವರು ಮಹಿಳಾ ವಿರೋಧಿಗಳು ಎಂದು ರಾಮಲಿಂಗಾರೆಡ್ಡಿ ಹೇಳಿದ್ದಾರೆ.