Select Your Language

Notifications

webdunia
webdunia
webdunia
webdunia

ವಾಮಾಚಾರ ಆರೋಪ: ವ್ಯಕ್ತಿಯನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಗ್ರಾಮಸ್ಥರು

ವಾಮಾಚಾರ ಆರೋಪ: ವ್ಯಕ್ತಿಯನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಗ್ರಾಮಸ್ಥರು
ಗದಗ , ಭಾನುವಾರ, 16 ಸೆಪ್ಟಂಬರ್ 2018 (15:39 IST)
ಮುಳ್ಳುಹಂದಿಯ ಮುಳ್ಳನ್ನು ಬೇರೆಯವರ ಮನೆಯಲ್ಲಿ ಇಟ್ಟು ಜಗಳವಾಡೋ ಹಾಗೆ ಮಾಡ್ತಿದ್ದ ವಾಮಾಚಾರಿಯೊಬ್ಬನನ್ನು ಗ್ರಾಮಸ್ಥರೇ ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ನಡೆದಿದೆ.

ಗದಗ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಜಿಲ್ಲೆಯ ಮುಳಗುಂದದ ಸಿದ್ದೇಶ್ವರ ನಗರದಲ್ಲಿ ಈ ಘಟನೆ ನಡೆದಿದ್ದು, ವಾಮಾಚಾರಿಯನ್ನು  ಲಕ್ಷ್ಮಣ ಭಂಗಿ ಎಂದು ಗುರುತಿಸಲಾಗಿದೆ. ಗ್ರಾಮದ ಮಾಂತೇಶ್ ಎನ್ನೋರ ಮನೆಯ ಹೊರಗೆ ಮುಳ್ಳುಹಂದಿಯ ಮುಳ್ಳನ್ನು ಇಡುವಾಗ ವಾಮಾಚಾರಿ ಸಿಕ್ಕಿಬಿದ್ದಿದ್ದಾನೆ. ಮುಳ್ಳನ್ನು ಈ ರೀತಿ ಇಟ್ಟರೆ ಮನೆಯಲ್ಲಿ ಜಗಳಗಳಾಗಿ ಮನೆ ಬೇರೆಯಾಗುತ್ತದೆ ಎನ್ನುವ ನಂಬಿಕೆಯಿದೆ. ಈ ಹಿಂದೆಯೂ ಸಹ ಲಕ್ಷ್ಮಣ ಇದೇ ಬಗೆಯಾಗಿ‌ ಬೇರೆ ಬೇರೆ ವಾಮಾಚಾರ ಮಾಡುವಾಗ ಸಿಕ್ಕಿಬಿದ್ದಿದ್ದು, ಆಗ ಗ್ರಾಮಸ್ಥರು ಈತನಿಗೆ ಎಚ್ಚರಿಕೆ ನೀಡಿದ್ದರು ಎನ್ನಲಾಗುತ್ತಿದೆ.  

ಬೆಳಗಿನ ಜಾವ ಈ ಘಟನೆ ನಡೆದಿದ್ದು, ಲಕ್ಷ್ಮಣ ಭಂಗಿಯನ್ನು ಹಿಡಿದ ಗ್ರಾಮಸ್ಥರು ಮುಳಗುಂದ ಪೊಲೀಸರಿಗೆ ಒಪ್ಪಿಸಿದ್ದಾರೆ. ಮುಳಗುಂದ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಪೊರಕೆ ಹಿಡಿದ ಬಿಜೆಪಿ ಶಾಸಕ