Select Your Language

Notifications

webdunia
webdunia
webdunia
webdunia

ಟಿವಿ ರಿಪೋರ್ಟರ್ ಎಂದು ಸುಳ್ಳು ಹೇಳಿದ ವ್ಯಕ್ತಿ ಪೊಲೀಸ್ ವಶಕ್ಕೆ

ಟಿವಿ ರಿಪೋರ್ಟರ್ ಎಂದು ಸುಳ್ಳು ಹೇಳಿದ ವ್ಯಕ್ತಿ ಪೊಲೀಸ್ ವಶಕ್ಕೆ
ಕಾರವಾರ , ಶುಕ್ರವಾರ, 14 ಸೆಪ್ಟಂಬರ್ 2018 (18:38 IST)
ಟಿವಿ ವರದಿಗಾರ ಎಂದು ಹೇಳಿಕೊಂಡು ಓಡಾಡುತ್ತಿದ್ದ ಯುವಕನನ್ನುಪೊಲೀಸರು ವಶಕ್ಕೆ ಪಡೆದಿದ್ದಾರೆ.

ರಾಜ್ಯದ ಖಾಸಗಿ ಚಾನೆಲ್ ವೊಂದರ  ವರದಿಗಾರನೆಂದು ಹೊನ್ನಾವರ ಪಟ್ಟಣದಲ್ಲಿ ಓಡಾಡಿಕೊಂಡಿದ್ದ ಅಂಕೋಲಾ ಮೂಲದ ಲೂಯಿಸ್ ಎನ್ನುವವನನ್ನು ಪೊಲೀಸರು ವಶಕ್ಕೆಪಡೆದಿದ್ದಾರೆ.
ಪಿಎಸ್ಐ ಸಂತೋಷ್ ಕಾಯ್ಕಿಣಿ ಅವರಿಗೆ ಕರೆ ಮಾಡಿದ್ದ ಲೂಯಿಸ್, ತನಗೂ ಹಾಗೂ ಇನ್ಯಾರದ್ದೋ ನಡುವೆ ಗಲಾಟೆ ನಡೆಯಲಿದೆ. ಕೂಡಲೇ ಸ್ಥಳಕ್ಕಾಗಮಿಸುವಂತೆ ಗೇರುಸೊಪ್ಪಾ ವೃತ್ತಕ್ಕೆ ಕರೆಯಿಸಿ ಕೊಂಡಿದ್ದ. ಈ ವೇಳೆ ಯುವತಿ ಯೊಬ್ಬಳ ಜತೆ ಇದ್ದಲೂಯಿಸ್, ಪೊಲೀಸರು ಬರುತ್ತಿದ್ದಂತೆ ಯಾರಿಗೋ ಕರೆಮಾಡಿ ಅಸಭ್ಯವಾಗಿ ಬೈದಾಡುತ್ತಿದ್ದ. ಈ ವೇಳೆ ಪೊಲೀಸರು ಬೈಕ್ ನ ದಾಖಲೆಗಳನ್ನು ಪರಿಶೀಲಿಸಿದಾಗ, ತಾನೊಬ್ಬ ಚಾನೆಲ್ ವರದಿಗಾರ. ನಾನು ಹೇಳಿದಂತೆ ನೀವು ನಡೆದುಕೊಳ್ಳಬೇಕು ಎಂದಿದ್ದಾನೆ. ಪೊಲೀಸರು ಈ ವೇಳೆ ಚಾನೆಲ್ ನ ಎಂಡಿಯವರೊಂದಿಗೆ ದೂರವಾಣಿ  ಕರೆಮಾಡಿ ಮಾತನಾಡಿದಾಗ ಈತ ವರದಿಗಾರ ಅಲ್ಲವೆಂಬುದು ತಿಳಿದು ಬಂದಿದೆ.

ಲೂಯಿಸ್ ನನ್ನು ವಶಕ್ಕೆ ಪಡೆದ ಪೊಲೀಸರು, ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದ ಕುರಿತಾಗಿ ಪ್ರಕರಣ ದಾಖಲಿಸಿಕೊಂಡು ಬೈಕ್ ನ್ನು ಸೀಜ್ ಮಾಡಿದ್ದಾರೆ.

 

 

Share this Story:

Follow Webdunia kannada

ಮುಂದಿನ ಸುದ್ದಿ

ಶಾಲಾ ವಿದ್ಯಾರ್ಥಿ ಮೇಲೆ ಕಂಡಕ್ಟರ್ ನಿಂದ ಹಲ್ಲೆ