Select Your Language

Notifications

webdunia
webdunia
webdunia
webdunia

ನೂರಕ್ಕೆ ನೂರರಷ್ಟು ಸರಕಾರ ಭದ್ರ ಎಂದ ಮಾಜಿ ಸಿಎಂ

ನೂರಕ್ಕೆ ನೂರರಷ್ಟು ಸರಕಾರ ಭದ್ರ ಎಂದ ಮಾಜಿ ಸಿಎಂ
ಹಾಸನ , ಶುಕ್ರವಾರ, 14 ಸೆಪ್ಟಂಬರ್ 2018 (16:35 IST)
ಹೆಚ್.ಡಿ. ಕುಮಾರಸ್ವಾಮಿಯವರನ್ನ 5 ವರ್ಷ ಸಿಎಂ ಆಗಿರಿ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಐದು ವರ್ಷ ನೂರಕ್ಕೆ‌ ನೂರು ಈ ಸರ್ಕಾರ ಸುಭದ್ರವಾಗಲಿದೆ ಎಂದು ಮಾಜಿ ಸಿಎಂ ಹೇಳಿಕೆ ನೀಡಿದ್ದಾರೆ.

ಶ್ರವಣಬೆಳಗೊಳದಲ್ಲಿ ‌ಮಾಜಿ‌ ಮುಖ್ಯಮಂತ್ರಿ ಎಂ. ವೀರಪ್ಪಮೊಯ್ಲಿ ಹೇಳಿಕೆ ನೀಡಿದ್ದು, ಯಾರೋ ಒಬ್ಬರು ಅಥವಾ  
ಇಬ್ಬರಿಂದ ಸರ್ಕಾರ ಉರುಳಿಸಲು ಸಾಧ್ಯವಿಲ್ಲ. ಸಮ್ಮಿಶ್ರ ಸರ್ಕಾರ ಆಪತ್ತಿನಲ್ಲಿದೆ ಎನ್ನೋದು ಕೇವಲ‌ ಊಹಾಪೋಹ.  
ಸರ್ಕಾರ ಉರುಳಿಸಲು ಯತ್ನಿಸುವವರು ನಾಶವಾಗುತ್ತಾರೆ ಎಂದಿದ್ದಾರೆ.

ಬಾಹುಬಲಿ‌ಸ್ವಾಮಿ‌‌ ಮಹಾ ಮಸ್ತಕಾಭಿಷೇಕದ ಕೊನೆ ದಿನದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಹೇಳಿಕೆ ನೀಡಿರುವ ವೀರಪ್ಪ ಮೊಯ್ಲಿ ಅವರು, ಬಿ.ಎಸ್.ಯಡಿಯೂರಪ್ಪ ಈ ಹಿಂದೆ ಬಿಜೆಪಿಗೆ ಶಾಪ ಹಾಕಿ‌ ಹೋಗಿದ್ರು. ನಮ್ಮಪ್ಪನಾಣೆ ಮತ್ತೆಂದು ಬಿಜೆಪಿಗೆ ಅಧಿಕಾರಕ್ಕೆ ಬರೋದಿಲ್ಲ. ಸರ್ಕಾರವನ್ನು ಬೀಳಿಸಲು ಯತ್ನಿಸಿದ್ರೆ ಬಿಜೆಪಿಗೇ ಕೆಟ್ಟ ಹೆಸರು ಬರಲಿದೆ. ವಾಮಾಚಾರದ ಮೂಲಕ ಸರ್ಕಾರ ಬೀಳಿಸಲು ಯತ್ನಿಸಿದ್ರೆ ಅವರಿಗೇ ಒಳ್ಳೆದಾಗೋದಿಲ್ಲ. ನಮ್ಮನ್ನ ಒಡೆಯಲು ಬಿಜೆಪಿಯಿಂದ ಸಾಧ್ಯವಿಲ್ಲ. ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಯಾವುದೇ ಯೋಜನೆ ಕೊಡುಗೆಯಾಗಿ ನೀಡಿಲ್ಲ.
ಕೇವಲ‌ ಚುನಾವಣೆ ಬಂದಾಗಷ್ಟೇ ಕರ್ನಾಟಕ‌ ನೆನಪಾಗುತ್ತೆ ಎಂದು ದೂರಿದ್ದಾರೆ.

ನರೇಂದ್ರ ಮೋದಿ ಓರ್ವ ಸರ್ವಾಧಿಕಾರಿ. ಕೇಂದ್ರ ಸರ್ಕಾರದಲ್ಲಿ ಆಂತರಿಕ‌ ಪ್ರಜಾಪ್ರಭುತ್ವ ಇಲ್ಲ ಎಂದು ಟೀಕೆ
ಮಾಡಿದರು. ಕೇಂದ್ರ ಸರ್ಕಾರ ಐಟಿ ಮತ್ತು ಸಿಬಿಐ ದುರುಪಯೋಗ ಮಾಡಿಕೊಂಡು ವಿಪಕ್ಷಗಳನ್ನ ಬಗ್ಗು ಬಡಿಯುವ ಯತ್ನ ನಡೆಯುತ್ತಿದೆ ಎಂದೂ ಆಕ್ರೋಶ ವ್ಯಕ್ತಪಡಿಸಿದರು.  




Share this Story:

Follow Webdunia kannada

ಮುಂದಿನ ಸುದ್ದಿ

ಶಾಸಕ ಸತೀಶ್ ಜಾರಕಿಹೊಳಿ ಹೇಳ್ತಿರೋದೇನು ಗೊತ್ತಾ?