Select Your Language

Notifications

webdunia
webdunia
webdunia
webdunia

ಯುವಕನ ಕೊಲೆ ಮಾಡುತ್ತಿದ್ದ ವಿಡಿಯೋ ವೈರಲ್

ಯುವಕನ ಕೊಲೆ ಮಾಡುತ್ತಿದ್ದ ವಿಡಿಯೋ ವೈರಲ್
ಕಲಬುರಗಿ , ಶುಕ್ರವಾರ, 19 ಜೂನ್ 2020 (17:08 IST)
ನಾಲ್ಕು ಜನರ ಗುಂಪೊಂದು ಯುವಕನೊಬ್ಬನನ್ನು ಮನಸೋ ಇಚ್ಛೆ ಥಳಿಸಿ ಕೊಲೆಗೆ ಯತ್ನಿಸಿ ಹಲ್ಲೆ ಮಾಡಿದ ವಿಡಿಯೋ ವೈರಲ್ ಆಗಿದ್ದು ಜನತೆ ಬೆಚ್ಚಿಬಿದ್ದಿದ್ದಾರೆ.

ಕಲಬುರಗಿ ನಗರದ ಐವಾನ್ ಇ ಶಾಹಿ ಪ್ರದೇಶದಲ್ಲಿ ಬಸವರಾಜ್ ಆಮಟೆ ಎಂಬಾತನನ್ನು ಸಿನಿಮಿಯ ರೀತಿಯಲ್ಲಿ ಬಾಬು ಜಗಜೀವನರಾಮ್ ನಗರದ ಅರ್ಜುನ್ ಧರಣಿ, ಅಮೀತ್ ಕಟ್ಟಿಮನಿ, ಭವಾನಿ ಕುಮಾರ್ ಹಲ್ಲೆ ನಡೆಸಿದ್ದರು.

ಇದನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿ ಹರಿಬಿಡಲಾಗಿತ್ತು. ವಿಡಿಯೋ ವೈರಲ್ ಆಗುತ್ತಿದ್ದಂತೆ ಜನ ಬೆಚ್ಚಿಬಿದ್ದಿದ್ದರು.

ಈಗ ಸ್ಟೇಷನ್ ಬಜಾರ್ ಪೊಲೀಸರು ಮೂವರು ಆರೋಪಿಗಳನ್ನು ಬಂಧನ ಮಾಡಿದ್ದಾರೆ. ಪ್ರಮುಖ ಆರೋಪಿ ಅರ್ಜುನ್ ತಲೆ ಮರೆಸಿಕೊಂಡಿದ್ದು ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಬಾಲಕಿಗೆ ಹೆದರಿಸಿದ ಸೋದರ ಮಾವನಿಂದ ಅತ್ಯಾಚಾರ