Select Your Language

Notifications

webdunia
webdunia
webdunia
webdunia

15 ಜನ ಕುಖ್ಯಾತ ದರೋಡೆಕೋರರ ಬಂಧನ

ದರೋಡೆಕೋರರು
ಮೂವರು ಕುಖ್ಯಾತ ದರೋಡೆಕೋರರನ್ನು ಪೊಲೀಸರು ಬಂಧಿಸಿದ್ದು, ಬಂಧಿತರ ಸಂಖ್ಯೆ 15ಕ್ಕೆ ಏರಿದೆ.

ರಾಯಚೂರು ಶಕ್ತಿನಗರ ವ್ಯಾಪ್ತಿಯಲ್ಲಿ ಗುತ್ತಿಗೆದಾರ ಹರ್ಷನ್ ಎಂಬಾತರ ಮನೆಗೆ ನುಗ್ಗಿದ್ದ 20 ಜನರು ಹಣಕ್ಕಾಗಿ ಬೆದರಿಕೆ ಹಾಕಿದ್ದರು.

ಅಲ್ಲದೇ ಆನ್ ಲೈನ್ ಮೂಲಕ 5 ಲಕ್ಷ ರೂಪಾಯಿ ಪಡೆದುಕೊಂಡಿದ್ದು, ಇನ್ನೂ 15 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು.
ಈ ಕುರಿತು ಕೇಸ್ ದಾಖಲಾಗಿದ್ದೆ ತಡ, ಕಾರ್ಯಾಚರಣೆಗೆ ಇಳಿದಿದ್ದ ಪೊಲೀಸರು ಮೊದಲ ಹಂತದಲ್ಲಿ 12 ಜನರನ್ನು ಬಂಧನ ಮಾಡಿದ್ದರು.

ಈಗ 3 ದರೋಡೆಕೋರರು ಅರೆಸ್ಟ್ ಆಗಿದ್ದಾರೆ. ತಪ್ಪಿಸಿಕೊಂಡ 5 ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಡಿಕೆ ಶಿವಕುಮಾರ್ ಗೆ ಕೆಪಿಸಿಸಿ ಅಧಿಕಾರ ಹಸ್ತಾಂತರಕ್ಕೆ ಮುಹೂರ್ತ ಫಿಕ್ಸ್