Publish Date: Thu, 23 Aug 2018 (20:04 IST)
Updated Date: Thu, 23 Aug 2018 (20:09 IST)
ಮಾಜಿ ಪ್ರಧಾನಿ ಹಾಗೂ ದೇಶ ಕಂಡ ಅಪರೂಪದ ಸಜ್ಜನ ರಾಜಕಾರಣಿ, ದಿವಂಗತ ಅಟಲ್ ಬಿಹಾರಿ ವಾಜಪೇಯಿ ವಿಧಿ ವಶರಾದ ಹಿನ್ನಲೆಯಲ್ಲಿ ಅವರ ಅಸ್ಥಿಯ ದರ್ಪಣ ಹಿಂದೂ ಸಂಪ್ರದಾಯದಂತೆ ನಡೆಯಿತು.
ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿಯಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಚಿತಾಭಸ್ಮ ಬಿಡುವ ದರ್ಪಣ ಕಾರ್ಯಕ್ರಮ ನೆರವೇರಿತು. ದೇಶದಾ ಎಲ್ಲಾ ನದಿಗಳಲ್ಲಿಯೂ ಅಟಲ್ ಅಸ್ಥಿ ಬಿಡುವ ಕಾರ್ಯ ನಡೆಯಿತು.
ಪಶ್ಚಿಮವಾಹಿನಿಯಲ್ಲಿ ಹಿಂದೂ ಸಂಪ್ರದಾಯದಂತೆ ಅಟಲ್ ಅಸ್ಥಿ ದರ್ಪಣ ನಡೆಯಿತು.
ಪಶ್ಚಿಮವಾಹಿನಿ ಬಳಿ ಭಜನೆ ಮಾಡುವ ಮೂಲಕ ಅಟಲ್ ಜೀ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥನೆ ಸಲ್ಲಿಕೆ ಮಾಡಲಾಯಿತು. ವೇದಬ್ರಹ್ಮ ಭಾನುಪ್ರಕಾಶ್ ಶರ್ಮ ನೇತೃತ್ವದಲ್ಲಿ ವಿಧಿ ವಿಧಾನಗಳು ನಡೆದವು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಅನಂತಕುಮಾರ ಸೇರಿದಂತೆ ರಾಜ್ಯದ ಬಿಜೆಪಿ ಪ್ರಮುಖರು, ಕಾರ್ಯಕರ್ತರು ಪಾಲ್ಗೊಂಡಿದ್ದರು.