Publish Date: Wed, 22 Aug 2018 (19:40 IST)
Updated Date: Wed, 22 Aug 2018 (19:42 IST)
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಚಿತಾಭಸ್ಮ ರಾಜಧಾನಿಗೆ ಆಗಮಿಸಿದೆ.
ದೇಶ ಕಂಡ ಅಪರೂಪದ ರಾಜಕಾರಣಿ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಚಿತಾಭಸ್ಮ ರಾಜಧಾನಿ ಬೆಂಗಳೂರಿಗೆ ಆಗಮಿಸಿದೆ. ಬೆಂಗಳೂರಿಗೆ ದಿವಂಗತ ಮಾಜಿ ಪ್ರಧಾನಿಯ ಚಿತಾಭಸ್ಮ ಆಗಮನ ಹಿನ್ನೆಲೆ ಪಕ್ಷದ ಪ್ರಮುಖರು, ಕಾರ್ಯಕರ್ತರು ಏರಪೋರ್ಟ ಹಾಗೂ ಪಕ್ಷದ ಕಚೇರಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.
ಚಿತಾಭಸ್ಮ ಬರಮಾಡಿಕೊಳ್ಳಲು ಏರ್ಪೋಟ್ ಗೆ ಆಗಮಿಸಿದ ಶಾಸಕ ಸಿ.ಟಿ.ರವಿ ಸೇರಿದಂತೆ ಹಾಲಿ ಹಾಗೂ ಮಾಜಿ ಶಾಸಕರು, ಪ್ರಮುಖರು ಆಗಮಿಸಿದ್ದರು.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಚಿತಾಭಸ್ಮವನ್ನು ದೆಹಲಿಯಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಂದರು. ನಂತರ ಏರ್ಪೋಟ್ ನಿಂದ ತೆರೆದ ವಾಹನದಲ್ಲಿ ರೋಡ್ ಶೋ ಮುಖಾಂತರ ಬೆಂಗಳೂರಿನ ಬಿಜೆಪಿ ಕಛೇರಿಗೆ ಚಿತಾಭಸ್ಮ ತಲುಪಿತು. ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ದುಃಖವ್ಯಕ್ತಪಡಿಸಿ ಅಗಲಿದ ನಾಯಕನ ಗುಣಗಾನ ಮಾಡಿದರು.