Publish Date: Sat, 17 Dec 2022 (14:19 IST)
Updated Date: Sat, 17 Dec 2022 (14:35 IST)
ಮಾದಕ ವಸ್ತು ಮಾರಾಟ ಮಾಡ್ತಿದ್ದ ಇಬ್ಬರು ಆರೋಪಿಗಳ ಬಂಧನ ಮಾಡಲಾಗಿದ್ದು,ಬೆಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆ ನಡೆಸಿದ್ದಾರೆ.ಸ್ವಿಗ್ಗಿ ಮತ್ತು ಜೊಮ್ಯಾಟೋ ಟೀ ಶರ್ಟ್ ಧರಿಸಿ ಮಾದಕ ವಸ್ತು ,ಎಂಡಿಎಂಎ ಹಾಗೂ ಎಲ್ ಎಸ್ ಡಿ ಟಾಬ್ಲೆಟ್ಸ್ ಮಾರಾಟ ಮಾಡ್ತಿದ್ದ ಆರೋಪಿ ಬಿಹಾರ ಮೂಲದವನಾಗಿದ್ದ.ಅದೇ ರೀತಿ ಯಲಹಂಕ ಭಾಗದಲ್ಲೂ ಮಾದಕ ವಸ್ತು ಮಾರಾಟ ಮಾಡ್ತಿದ್ದ ಆರೋಪಿ ಅರೆಸ್ಟ್ ಆಗಿದ್ದಾನೆ.ಕೇರಳ ಮೂಲದ ವ್ಯಕ್ತಿ ಬಂಧನವಾಗಿದ್ದು,ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತು ಮಾರಾಟ ಮಾಡ್ತಿದ್ದ.ಬಂಧಿತರಿಂದ ಎಂಡಿ ಎಂ ಎ ಹಾಗೂ ಎಲ್ ಎಸ್ ಡಿ ಹಾಗೂ ಎರಡು ಪ್ರಕರಣಗಳ ಪೈಕಿ 10 ಲಕ್ಷ ರೂ ಮೌಲ್ಯದ ಮಾದಕ ವಸ್ತು ವಶಕ್ಕೆ ಪಡೆಯಲಾಗಿದೆ.