Publish Date: Fri, 16 Dec 2022 (21:01 IST)
Updated Date: Fri, 16 Dec 2022 (21:04 IST)
ಕಟ್ಟಡಕ್ಕೆ ವಿದ್ಯುತ್ ಮೀಟರ್ ಅಳವಡಿಸಲು 50 ಸಾವಿರ ರೂ. ಲಂಚಕ್ಕೆೆ ಬೇಡಿಕೆಯಿಟ್ಟ ಬೆಸ್ಕಾಂ ಸಹಾಯಕ ಎಂಜಿನಿಯರ್ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾನೆ.ಬಸವೇಶ್ವರನಗರ ಉಪ ವಿಭಾಗದ ಬೆಸ್ಕಾಂ ಸಹಾಯಕ ಎಂಜಿನಿಯರ್ ಆನಂದ್ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿಯಾಗಿದ್ದು,ಮಂಜೇಶ್ ಎಂಬುವವರು ಶಾಶ್ವತ ವಿದ್ಯುತ್ ಮೀಟರ್ ಅಳವಡಿಕೆಗಾಗಿ ಬಸವೇಶ್ವರನಗರದಲ್ಲಿರುವ ಬೆಸ್ಕಂ ಉಪ ವಿಭಾಗಕ್ಕೆೆ ಅರ್ಜಿ ಸಲ್ಲಿಸಿದ್ದರು. ಆದರೆ, ಕೆಲ ತಿಂಗಳುಗಳಿಂದ ಬೆಸ್ಕಾಂನಿಂದ ಯಾವುದೇ ಪ್ರತಿಕ್ರೀಯೆ ಬಂದಿರಲಿಲ್ಲ. ಹೀಗಾಗಿ ಮಂಜೇಶ್ ಬೆಸ್ಕಾಂ ಎ.ಇ. ಆನಂದ್ ಅವರನ್ನು ಸಂಪರ್ಕಿಸಿ ಈ ಬಗ್ಗೆೆ ಪ್ರಶ್ನಿಸಿದ್ದರು. ಶಾಶ್ವತವಾಗಿ ಮೀಟರ್ ಅಳವಡಿಸಲು 50 ಸಾವಿರ ರೂ. ಲಂಚಕ್ಕೆೆ ಆನಂದ್ ಬೇಡಿಕೆಯಿಟ್ಟಿದ್ರು. ಲಂಚ ಕೊಡಲು ಇಚ್ಛಿಸಿದ ಮಂಜೇಶ್ ಲೋಕಾಯುಕ್ತಕ್ಕೆೆ ಈ ಬಗ್ಗೆೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಲೋಕಾಯುಕ್ತ ಪೊಲೀಸರು, ರಾಜಾಜಿನಗರದ ಮುಖ್ಯ ರಸ್ತೆೆ ಬಳಿ ಶುಕ್ರವಾರ ಮಂಜೇಶ್ ಅವರಿಂದ ಆನಂದ್ 40 ಸಾವಿರ ರೂ. ಲಂಚ ಪಡೆಯುತ್ತಿದ್ದಾಗ ಟ್ರ್ಯಾಪ್ ಕಾರ್ಯಾಚರಣೆ ನಡೆಸಿ ಆನಂದ್‌ನನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ.