ತುಮಕೂರು ಜೆಡಿಎಸ್ ನ ಆಕಾಂಕ್ಷಿಯಾಗಿರೋ ಅಟ್ಟಿಕಾ @ ಬೊಮ್ಮನಹಳ್ಳಿ ಬಾಬುನಾ ಆಂಧ್ರ ಪೊಲೀಸ್ರು ವಶಕ್ಕೆ ಪಡೆದಿದ್ದಾರೆ. ಅನಂತಪುರದ ಬಳಿಯ ಯಲ್ಲೂರಿನ  ಮಹಿಳೆ ನೀಡಿದ್ದ ದೂರಿನ ಅನ್ವಯ ಬಾಬು ವಶಕ್ಕೆ ಪಡೆದಿದ್ದು ,ತನ್ನನ್ನು ಮದುವೆ ಆಗಿ  ಮೋಸ ಮಾಡಿದ್ದಾರೆ .ಶೇಕ್ ಮೀನಾಜ್   ಎಂಬ ಮಹಿಳೆಯನ್ನು  ಮದುವೆ ಅಗಿದ್ದ  ಆಯೂಬ್ ಅಲಿಯಾಸ್ ಅಟ್ಟಿಕಾ ಬಾಬು  ಡಿಸೆಂಬರ್12 ರಂದು  ಯಲ್ಲೂರಿಗೆ ಹೋಗಿ ಪತ್ನಿ ಮೇಲೆ ಹಲ್ಲೆ ಮಾಡಿ ಮನೆಯಲ್ಲಿ ಇದ್ದ  ವಸ್ತುಗಳನ್ನು ದ್ವಂಸ ಮಾಡಿ, ಕೊಲೆಗೆ ಯತ್ನಿಸಿದ್ದಾರೆಂದು ಮಹಿಳೆ ಆರೋಪಿಸಿ ದೂರು ನೀಡಿದ್ರು.ದೂರಿನ ಅನ್ವಯ IPC sec 448,342,307,386,427,498A,506, ಮತ್ತು ವರದಕ್ಷಿಣೆ ಕಿರುಕುಳ ಅರೋಪದಡಿ ಕೇಸ್ ದಾಖಲಾಗಿತ್ತು.ಕೇಸ್ ದಾಖಲು ಮಾಡಿ ಅರೋಪಿಯನ್ನು ಹುಡುಕಿಕೊಂಡು ಬಂದಿದ್ದ ಯಲ್ಲೂರು ಪೊಲೀಸರು,ಸಿಸಿಬಿ ಹಾಗು ಹೈಗ್ರೌಂಡ್ಸ್ ಪೊಲೀಸರ ಸಹಾಯದಿಂದ ಅಟ್ಟಿಕಾ ಬಾಬು ವಶಕ್ಕೆ ಪಡೆದಿದ್ದಾರೆ.ವಶಕ್ಕೆ ಪಡೆದು ಅನಂತಪುರಕ್ಕೆ ಕರೆದೊಯ್ಯುದಿರೊ ಪೊಲೀಸರು. ಅನಂತಪುರದಲ್ಲಿ ಬಂಧನ ಮಾಡಿ  ನ್ಯಾಯಾಲಯದ ಮುಂದೆ ಹಾಜರು ಪಡಿಸಲಿದ್ದಾರೆ.